*”ಕರ್ನಾಟಕ ಸೇವಾ ರತ್ನ” ಪ್ರಶಸ್ತಿಗೆ ಪಿಎಸ್ಐ ಬಿ ನಾಗಪ್ಪ ಆಯ್ಕೆ* 

*ಶಿರಸಿ* :ದಶಕಗಳ ಕಾಲದಿಂದ ಕರ್ನಾಟಕ ಪೊಲೀಸ್ ಸೇವೆಯಲ್ಲಿ ನಿಷ್ಠೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ, ಮುಖ್ಯಮಂತ್ರಿ ಪದಕ ವಿಜೇತರೂ ಆಗಿರುವ ಶಿರಸಿಯ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ಇವರು ಮೂಲತಃ ರಾಯಚೂರು ಜಿಲ್ಲೆಯ ಪಾಮನಕಲ್ಲೂರ ಗ್ರಾಮದವರು ಅವರು ಕರ್ನಾಟಕ ಪ್ರೇಸ್ ಕ್ಲಬ್ ವಾರ್ಷಿಕ ಪ್ರಶಸ್ತೆಗೆ ಆಯ್ಕೆಯಾಗಿದ್ದಾರೆ.‌ನಾಗಪ್ಪ ಅವರ ಪಾಹಿತ್ಯ ಹಾಗೂ ಸಮಾಜ ಸೇವೆ ಗುರುತಿಸಿ

ಕರ್ನಾಟಕ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ‌ ನಡೆಯಲಿರುವ “ಸಾಧಕರ ಸಮಾಗಮ” ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ. ಬದುಕಿನೊಂದಿಗೆ ಸಾಧಕರ ಜೀವನವು ಕತ್ತಲೆಯಲ್ಲಿ ಹೊಳೆಯುವ ನಕ್ಷತ್ರಗಳಂತೆ, ಕುಟುಂಬ ಮತ್ತು ಸಮಾಜದೊಂದಿಗೆ ಹೋರಾಟ ಮಾಡುವ ಜೊತೆಗೆ ಸೇವಾ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಆದರೂ ಎಲ್ಲವನ್ನು ಮೆಟ್ಟಿನಿಂತು ಸಾಧಿಸುವ ಛಲ ತೋರಿದ ನಿಮ್ಮ ಧೈರ್ಯ ಮತ್ತು ಆತ್ಮಾಭಿಮಾನಕ್ಕೆ ಈ ನಾಡು ಧನ್ಯ. ನಿಮ್ಮಂತ ಸಾಧಕರನ್ನು ಗೌರವಿಸುವುದು ಮತ್ತು ಸ್ವಲ್ಪ ಸಮಯ ನಿಮ್ಮೊಂದಿಗೆ ಕಳೆಯುವುದೇ ನಮ್ಮ ಸೌಭಾಗ್ಯ ಎನ್ನಬಹುದು ‘ ಎಂದು ಕರ್ನಾಟಕ ಪ್ರೇಸ್ ಕ್ಲಬ್ ವತಿಯಿಂದ ನಾಗಪ್ಪ ಅವರಿಗೆ ಪ್ರಶಂಸನೀಯವಾಗಿ ಪತ್ರ ಬರೆಯಲಾಗಿದೆ.‌ಸಾಧಕರ ಸಮಾಗಮ ಕಾರ್ಯಕ್ರಮವು ಬೆಂಗಳೂರಿನ ನಾಗರಭಾವಿಯ ಕಲಾಗ್ರಾಮದಲ್ಲಿ ಜ.13 ರಂದು ಸಂಜೆ 4.00 ಗಂಟೆಗೆ ಜರುಗಲಿದ್ದು, ಇದೊಂದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿದೆ. ಇನ್ನು ಈ‌ ಹಿಂದೆಯೂ‌ ನಾಗಪ್ಪ ಅವರು ಸಾಹಿತ್ಯಕ್ಕಾಗಿ ಅನೇಕ ಗೌರವ ಸ್ವೀಕರಿಸಿದ್ದಾರೆ.

Leave a Reply

Your email address will not be published. Required fields are marked *