ಮಸ್ಕಿ : ಡಿ 30 ಪಟ್ಟಣದಲ್ಲಿರುವ ವಿವಿಧ ಇಲಾಖೆಗಳ ವಸತಿ ನಿಲಯಗಳಲ್ಲಿ ರಾತ್ರಿ ವೇಳೆ ಕಡ್ಡಾಯವಾಗಿ ವಾಸ ಮಾಡಬೇಕೆಂದು ಖಾದಿ ಮತ್ತು ಗ್ರಾಮದ್ಯೋಗ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಆರ್.ಬಸನಗೌಡ ತುರವಿಹಾಳ ತಾಕೀತು ಮಾಡಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ತಾಲೂಕಾಧಿಕಾರಿಗಳ ಮತ್ತು ವಸತಿ ನಿಲಯಗಳ ನಿಲಯಪಾಲಕರ ಮತ್ತು ವಸತಿ ಶಾಲೆಗಳ ಪ್ರಾಂಶುಪಾಲರ ಸಭೆಯನ್ನು ಮಂಗಳವಾರ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು ವಸತಿ ನಿಲಯಗಳಲ್ಲಿ ವಾರ್ಡನಗಳು ಕಡ್ಡಾಯವಾಗಿ ವಾಸ ಮಾಡಬೆಕು. ವಸತಿ ನಿಲಯಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುತ್ತಿರುವ ಗುತ್ತಿಗೆದಾರರಿಂದ ನಗದು ಹಣವನ್ನು ಪಡೆಯದೇ ಆಹಾರ ಪದಾರ್ಥಗಳನ್ನು ಪೂರೈಸುವಂತೆ ತಾಲೂಕು ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಬೇಕು. ವಸತಿ ನಿಲಯಗಳಿಗೆ ಇನ್ಮೂಂದೆ ಆಹಾರ ಪದಾರ್ಥಗಳನ್ನು ಗುತ್ತಿಗೆ ಪಡೆದ ಗುತ್ತಿಗೆದಾರರು ಆಹಾರ ಸಾಮಾಗ್ರಿಗಳನ್ನೇ ಪೂರೈಸುವಂತೆ ತಾಲೂಕು ಅಧಿಕಾರಿಗಳು ಸೂಚಿಸಬೇಕು. ವಾರ್ಡನ್‌ಗಳು ನಗದು ಹಣವನ್ನು ಪಡಿಯದೇ ಸಾಮಾಗ್ರಿಗಳ ಪಡೆಯಬೇಕೆಂದರು. ವಾರಕೊಮ್ಮೆ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಿಸಬೇಕು, ಪ್ರತಿಯೊಂದು ನಿಲಯಗಳಿಗೆ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಬೇಕು. ನೋಡಲ್ ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಬೇಕು. ಅನುಮತಿ ಇಲ್ಲದೇ ವಿದ್ಯಾರ್ಥಿಗಳನ್ನು ಹೊರಗಡೆ ಕಳುಹಿಸುವಂತಿಲ್ಲ. ವಸತಿ ನಿಲಯಗಳಲ್ಲಿ ದಿನಪತ್ರಕೆಗಳು ಹಾಗೂ ಸ್ಪರ್ದಾತ್ಮಕ ಪುಸ್ತಕಗಳ ಒಳಗೊಂಡು ಸುಸಜ್ಜಿತವಾದ ಗ್ರಂಥಾಲಯಗಳನ್ನು ನಿರ್ಮಿಸಬೇಕು. ಸಿಬ್ಬಂದಿಯವರು ಸ್ವಚ್ಚತೆಯಿಂದ ಅಡುಗೆ ಮಾಡಬೆಕು ಹಾಗೂ ಅಡುಗೆ ಬಟ್ಟೆ ಧರಿಸಿ ಅಡುಗೆ ಮಾಡಬೆಕು.
ಎಸ್.ಎಸ್.ಎಲ್.ಸಿ ಪಲಿತಾಂಶ ಸುದಾರಿಸಲು ಬಿ.ಇಡಿ ಪಧವಿ ಪಡೆದಿರುವ ವಾರ್ಡನಗಳು ವಸತಿ ನಿಲಯದಲ್ಲಿ ತರಗತಿಗಳು ನಡೆಸಬೇಕೆಂದರು.
ಈ ಸಂದರ್ಭದಲ್ಲಿ ತಾ.ಪಂ ಇಒ ಅಮರೇಶ ಯಾದನ, ಸಹಾಯಕ ನಿದೇರ್ಶಕ ಸೊಮನಗೌಡ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ. ಅಲ್ಪಸಂಖ್ಯಾತರ ಇಲಾಖೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ತಾಲೂಕಾಧಿಕಾರಿಗಳು ಮತ್ತು ವಸತಿ ನಿಲಯಗಳ ವಾರ್ಡನ್‌ಗಳಿದ್ದರು.ಮಸ್ಕಿಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕರ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಯಿತು.

