ಮಸ್ಕಿ: ತಾಲ್ಲೂಕಿನ ಪಾಮನಕಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಲ್ಕರಾಗಿ ಗ್ರಾಮದ ನಿವೇಶನ ರಹಿತರಿಗೆ ರಾಜೀವಗಾಂಧಿ ಗ್ರಾಮೀಣ ವಸತಿ ನಿಗಮದಿಂದ ವಿವಾದವಿಲ್ಲದ ಸರಕಾರಿ ಭೂಮಿಯನ್ನು ಖರೀದಿ ಹಂಚಿಕೆ ಮಾಡಬೇಕೆಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕನಾಟಕ ರೈತ ಸಂಘದಿಂದ ಮನವಿ ಸಲ್ಲಿಸಲು ಮೂಲಕ ಮಂಗಳವಾರ ಒತ್ತಾಯಿಸಿದರು.
ನಂತರ ಸಂತೋಷ ಹಿರೇದಿನ್ನಿ ಮಾತನಾಡಿ ಪಾಮನಕಲ್ಲೂರು ಗ್ರಾ.ಪಂ ವ್ಯಾಪ್ತಿಯ ಚಿಲ್ಕರಾಗಿ ಗ್ರಾಮದಲ್ಲಿ ವಸತಿ ರಹಿತರಿದ್ದು, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಸೇರಿದಂತೆ ಮಡಿವಾಳ ಸಮಾಜದವರು ಕುರುಬರು, ಕುಂಬಾರು, ವಿಶ್ವಕರ್ಮ, ಈಡಿಗಾ, ಉಪ್ಪಾರ, ಮುಸ್ಲಿಂ ಮುಂತಾದ ಹಿಂದುಳಿದ ವರ್ಗದವರು ಅನೇಕ ವರ್ಷಗಳಿಂದ ವಸತಿ ಇಲ್ಲದೇ ಬಹುಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ರಾಜೀವಗಾಂಧಿ ವಸತಿ ಯೋಜನೆ ನಿಗಮ ದಿಂದ ನಿವೇಶನ ಯೋಜನೆಯ ಪ್ರಕ್ರಿಯೆಯೂ ೨೦೧೭ರಲ್ಲಿ ಆರಂಭವಾಗಿತ್ತು. ಆದರೆ, ಈ ಯೋಜನೆ ಅನುಷ್ಠಾನಗೊಂಡಿರುವುದಿಲ್ಲ.
ಕೂಡಲೇ ಪಾಮನಕೆಲ್ಲೂರು ಗ್ರಾ.ಪಂ ವ್ಯಾಪ್ತಿಯಲ್ಲಿ ವಿವಾದವಿಲ್ಲದ ಸರಕಾರಿ ಭೂಮಿಯನ್ನು ಖರೀದಿಸಿ ನಿಗಮದಿಂದ ಸೂಚಿಸಲಾದ ನಿಯಮ ೫ರ ಪ್ರಕಾರ ಫಲಾನುಭವಿಗಳನ್ನು ಊರಿನಲ್ಲಿ ಗ್ರಾಮಸಭೆ ನಡೆಸಿ ಫಲಾನುಭವಿಗಳ ಪೈಕಿ ಶೇ.೫೦ ರಷ್ಟು ಎಸ್‌ಸಿ, ಸೇ.೩೦ಎಸ್‌ಟಿ ಮತ್ತು ಶೇ.೨೦ರಷ್ಟು ೨೦ರಷ್ಟು ಹಿಂದುಳಿದ ವರ್ಗಗಳ ಫಲಾನುಭವಿಗಳನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.
ಒಂದು ವೇಳೆ ಸರಕಾರ ಹಾಗೂ ನಿಗಮದ ಈ ನಿಯಮಾವಳಿಗಳನ್ನು ಉಲ್ಲಂಘಿಸಿದರೆ ತಾ.ಪಂ ಕಾರ್ಯಾಲಯದ ಮುಂದೆ ಸಂಘಟನೆಯಿಂದ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾರುತಿ ಜಿನ್ನಾಪೂರ, ವೆಂಕಟೇಶ ಚಿಲ್ಕರಾಗಿ, ರಮೇಶ ಚಿಲ್ಕರಾಗಿ, ಭೀಮಣ್ಣ ಚಿಲ್ಕರಾಗಿ, ತಿರುಪತಿ ಮಸ್ಕಿ, ವೀರಭದ್ರಪ್ಪ, ಹುಲುಗಪ್ಪ ಚಿಲ್ಕರಾಗಿ, ಭಾಗಪ್ಪ, ಶಿವಪ್ಪ, ತಿಪ್ಪಣ್ಣ, ಹನುಮಪ್ಪ, ಬಸವರಾಜ ಸೇರಿದಂತೆ ಇನ್ನಿತರರಿದ್ದರು.
ಮಸ್ಕಿ ತಾಲೂಕಿನ ಪಾಮನಕೆಲ್ಲೂರು ಗ್ರಾ.ಪಂ ವ್ಯಾಪ್ತಿಯ ಚಿಲ್ಕರಾಗಿ ಗ್ರಾಮದ ವಸತಿ ರಹಿತರಿಗೆ ನಿವೇಶನ ಹಂಚಿಕೆಗೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

Leave a Reply

Your email address will not be published. Required fields are marked *