ಕಾರಟಗಿ : ಡಿ 30 ತಾಲೂಕಿನ ಮೈಲಾಪುರ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಬಳಿ ಇಂದು ರೈತರು ಸೇರಿ ಕಳಪೆ ಬೀಜ ವಿತರಣೆ ಖಂಡಿಸಿ ಭಾರಿ ಪ್ರತಿಭಟನೆ ನಡೆಸಿದರು.
ಬೂದುಗುಂಪ ಗ್ರಾಮದ ಶ್ರೀ ವೀರಭದ್ರೇಶ್ವರ ಟೇಡರ್ಸ್ ಸಂಸ್ಥೆಯಿಂದ ಕಳಪೆ ಬೀಜಗಳನ್ನು ವಿತರಿಸಲಾಗಿದೆ ಎಂದು ರೈತ ಮುಖಂಡ ಶಿವಕುಮಾರ್ ಬನ್ನೂರು (ಮೈಲಾಪುರ) ಗಂಭೀರ ಆರೋಪ ಮಾಡಿದರು.
ಈ ಕಳಪೆ ಬೀಜ ಬಳಕೆಯಿಂದ ಮೈಲಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರಿಗೆ ಒಟ್ಟು ಸುಮಾರು ಒಂಬತ್ತು ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ರೈತಾಪಿ ಜೀವನವು ಅನೇಕ ಸಮಸ್ಯೆಗಳ ಮಧ್ಯೆ ಕಷ್ಟಕರವಾಗಿ ಸಾಗುತ್ತಿರುವ ಸಂದರ್ಭದಲ್ಲಿ, ಈ ರೀತಿಯ ವಂಚನೆ ರೈತರಿಗೆ ಮಾಡಿರುವುದು ಅತಿ ದೊಡ್ಡ ಮೋಸವಾಗಿದೆ ಎಂದು ಅವರು ಹೇಳಿದರು.
ಈ ಪ್ರಕರಣದ ಕುರಿತು ಸರ್ಕಾರ ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ನಷ್ಟ ಅನುಭವಿಸಿದ ರೈತರಿಗೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮೈಲಾಪುರ ಗ್ರಾಮದ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸಿ, ಕಳಪೆ ಬೀಜ ವಿತರಣೆ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದರು. ರೈತರ ಪರವಾಗಿ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರಿಸುವ ಎಚ್ಚರಿಕೆಯನ್ನು ಅವರು ನೀಡಿದರು.
ಈ ಪ್ರತಿಭಟನೆಯಲ್ಲಿ

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಸವ ರೆಡ್ಡಪ್ಪ ಗೂಡೂರು ಉಪಾಧ್ಯಕ್ಷ ಸೋಮನಾಳ ಹಿರೇಮಠ ಗುರುಗಳು ಕಾರ್ಯದರ್ಶಿಗಳಾದ ಶಿವಕುಮಾರ್ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಚನ್ನಬಸವ ಮಾಲಿಪಾಟೀಲ್, ಅಮರೇಶಪ್ಪ ಮೇಲ್ಮಳಿಗೆ,
ನಿಂಗನಗೌಡ ಮಾಲಿಪಾಟೀಲ್,
ಅಮರೇಗೌಡ ಮಾಲಿಪಾಟೀಲ್
ಮತ್ತು ಇತರ ರೈತ ಮುಖಂಡರು ಹಾಗೂ ಊರಿನ ಗುರು ಹಿರಿಯರು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *