ಕವಿತಾಳ: ಡಿ 30 ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ವ್ಯಾಪ್ತಿಯಲ್ಲಿ ನಡೆದ ಸ್ಟಾಫ್ ನರ್ಸ್ ಕುಮಾರಿ ಜ್ಯೋತಿ ಅವರ ಅನುಮಾನಾಸ್ಪದ ಸಾವನ್ನು ಕೊಲೆ ಪ್ರಕರಣವಾಗಿ ಪರಿಗಣಿಸಿ ನಿಜವಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದಲ್ಲಿ ದೋಷಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ದಲಿತ ಸಂರಕ್ಷ ಸಮಿತಿ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ ನಾಯಕರು, ಜ್ಯೋತಿ ಅವರ ಸಾವು ಆತ್ಮಹತ್ಯೆಯಲ್ಲ, ಜಾತಿ ದ್ವೇಷದಿಂದ ನಡೆದ ಹತ್ಯೆಯೇ ಎಂಬ ಗಂಭೀರ ಅನುಮಾನಗಳು ಇದ್ದು, ಈ ಪ್ರಕರಣವನ್ನು ಎಸ್ಸಿ/ಎಸ್ಟಿ (ಅತ್ಯಾಚಾರ ತಡೆ) ಕಾಯ್ದೆಯಡಿ ದಾಖಲಿಸಿ ವೇಗದ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ಜ್ಯೋತಿ ಅವರ ಕುಟುಂಬಕ್ಕೆ ಸರ್ಕಾರದಿಂದ ಯೋಗ್ಯ ಪರಿಹಾರ ಹಾಗೂ ಭದ್ರತೆ ನೀಡಬೇಕೆಂದೂ ಮನವಿ ಮಾಡಿದರು.
ಇದೇ ವೇಳೆ, ಅನ್ಯಜಾತಿ ವಿವಾಹದ ಕಾರಣಕ್ಕೆ 7 ತಿಂಗಳ ಗರ್ಭಿಣಿಯಾಗಿದ್ದ ದಲಿತ ಮಹಿಳೆಯನ್ನು ಕೊಲೆಗೈದ ಹುಬ್ಬಳ್ಳಿ ಮರ್ಯಾದೆ ಹತ್ಯೆ ಪ್ರಕರಣವನ್ನು ಮಾನವೀಯತೆಗೆ ವಿರೋಧವಾದ ಅಮಾನುಷ ಕೃತ್ಯವೆಂದು ಪ್ರತಿಭಟನಾಕಾರರು ಖಂಡಿಸಿದರು.
ಇಂತಹ ಜಾತಿ ಆಧಾರಿತ ಹತ್ಯೆಗಳು ಮರುಕಳಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಬಳಿಕ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿ, ಎರಡೂ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ, ಆರೋಪಿಗಳ ತಕ್ಷಣದ ಬಂಧನ ಹಾಗೂ ದೋಷಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.
ಕಂದಾಯ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹುಚ್ಚಪ್ಪ ಬುಳ್ಳಾಪುರು, ಬಾಲಸ್ವಾಮಿ ಜಿನಾಪುರು, ಈರಪ್ಪ ಕೆಳಗೇರಿ, ಅರಳಪ್ಪ ತೂಪ್ಪದೂರು, ಹೆಚ್ ಬಸವರಾಜು, ಹುಲಗಪ್ಪ ಯಕ್ಲಾಸ್ ಪುರು, ನಿಂಗಪ್ಪ ತೋಳದ್, ಹುಚ್ಚಪ್ಪ ವಡವಟ್ಟಿ, ಚಂದಪ್ಪ ಹೆಸರೂರು, ಯಾಕೋಬ ಕಡತಲ್, ಮೌನೇಶ ಕೊಡ್ಲಿ, ಫಕಿರಪ್ಪ, ರಮೇಶ ಇರಬಗೇರ, ಬಸವರಾಜ ಕೆಲಗೇರ, ದೇವರಾಜ ಮ್ಯಾಗಳಮನಿ, ಶುಭಾಶ ಕೆಳಗೇರ, ರಸೂಲ ದಿದ್ದಗಿ, ಹನುಮಂತ ಬುಳ್ಳಾಪುರು , ಸಂತೋಷ ಕಲಶೆಟ್ಟಿ, ಹನುಮೇಶ ಭೋವಿ, ಮೈಬೂ ಅರಕೆರಿ, ಮೌನೇಶ ಚಲುವಾದಿ, ರಫಿ ಒಂಟಿಬಂಡಿ, ಹನುಮಂತ ಬುಳ್ಳಾಪುರು, ಸೇರಿದಂತೆ ಪೋಲಿಸ್ ಇಲಾಖೆ ಬಂದೋಬಸ್ ಒದಗಿಸಿತ್ತು.

