ಕವಿತಾಳ: ಡಿ 30
ಪಟ್ಟಣದಲ್ಲಿ ಇಂದು ದಿವಂಗತ ಶಂಕ್ರಪ್ಪ ಯಡವಲ್ ನೊಲಕೊಳ ಅವರ ಮೊದಲನೇ ಪುಣ್ಯತಿಥಿಯ ಅಂಗವಾಗಿ ಶಿವಶಂಕ್ರಪ್ಪ ನೆಲಕೊಳ ಸೇವಾ ಸಂಸ್ಥೆ (ರಿ) ವತಿಯಿಂದ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ನಡೆಯುವ ಮೂಲಕ ಸಾರ್ಥಕತೆ ಪಡೆದವು.

ಈ ಸಂದರ್ಭದಲ್ಲಿ ಪಟ್ಟಣದ ನವ ಚೇತನ ಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಊಟ ಮತ್ತು ಹಣ್ಣು–ಹಂಪಲುಗಳನ್ನು ವಿತರಿಸಲಾಯಿತು. ದಾನ–ಸೇವೆ ಮೂಲಕ ಪುಣ್ಯತಿಥಿಯನ್ನು ಆಚರಿಸುವುದು ಶಂಕ್ರಪ್ಪ ಯಡವಲ್ ಬದುಕಿನ ಮೌಲ್ಯಗಳಿಗೆ ಸಲ್ಲಿಸಿದ ಗೌರವವಾಗಿದ್ದು, ಮಾನವೀಯತೆಯ ಸಂದೇಶ ನೀಡಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಹುಸೇನಪ್ಪ ಯಡವಲ್ಲಿ ಅವರು, “ಮುಂದಿನ ವರ್ಷ ಶಿವಶಂಕ್ರಪ್ಪ ನೆಲಕೊಳ ಸೇವಾ ಸಂಸ್ಥೆ ವತಿಯಿಂದ ‘ರುದ್ರಾಶ್ರಮ’ವನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದೇವೆ. ಇದಕ್ಕಾಗಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಸಮಾಜದ ಎಲ್ಲ ವರ್ಗಗಳ ಸಹಭಾಗಿತ್ವದಿಂದ ಆಶ್ರಮವನ್ನು ಯಶಸ್ವಿಯಾಗಿ ಆರಂಭಿಸುವ ಸಂಕಲ್ಪವಿದೆ” ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಚಂದ್ರಶೇಖರ್ ಯಡವಲ್ಲಿ ಅವರು ಸೇವಾ ಚಟುವಟಿಕೆಗಳ ಬಗ್ಗೆ ವಿವರಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಈ ಕಾರ್ಯಕ್ರಮದಲ್ಲಿ ನವ ಚೇತನ ಶಾಲೆಯ ಮುಖ್ಯಸ್ಥರಾದ ಆನಂದ ಪ್ರಸಾದ್ ಫಾದರ್, ಸೇವಾಶ್ರಮದ ಸಿಸ್ಟರ್ ಲೂಸಿಯಾ ಮೇಡಂ ಹಾಗೂ ಲೀಡಿಯ ಮೇಡಂ, ವೈದ್ಯಾಧಿಕಾರಿಗಳಾದ ಡಾ. ಪ್ರವೀಣ್ ಕುಮಾರ್ ಮತ್ತು ಮಹಾಂತೇಶ ಸಂಕಲ್ ಸೇರಿದಂತೆ ಗಬ್ಬೂರು, ಹುಲುಗಪ್ಪ ಯಕ್ಲಾಸ್ಫೂರು, ಯಮೂನಪ್ಪ ಕವಿತಾಳ, ರಮೇಶ್ ಯಾದವ, ಪ್ರಕಾಶ ಯಡವಲ್ಲಿ ಅವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು, ಆಸ್ಪತ್ರೆಯ ರೋಗಿಗಳು ಹಾಗೂ ಪತ್ರಿಕಾಮಾಧ್ಯಮದ ಮಿತ್ರರ ಸಾನ್ನಿಧ್ಯದಲ್ಲಿ ನಡೆದ ಈ ಸೇವಾ ಕಾರ್ಯವು ಪುಣ್ಯತಿಥಿಯನ್ನು ಮಾನವೀಯ ಸ್ಪರ್ಶದೊಂದಿಗೆ ಆಚರಿಸಿದ ಉದಾಹರಣೆಯಾಗಿ ಉಳಿಯಿತು.

Leave a Reply

Your email address will not be published. Required fields are marked *