ಮಾನ್ವಿ,ಡಿ. 29-ತಾಲೂಕಿನ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪದಗ್ರಹಣ ಕಾರ್ಯಕ್ರಮವು ಕುವೆಂಪು ಅವರ ಜನ್ಮದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವುದರ ಮುಖಾಂತರ ಆರಂಭವಾಯಿತು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದಂತಹ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರು ರಾಜ ಸುಭಾಷ್‌ಚಂದ್ರ ನಾಯಕ್ ಪ್ರಧಾನ ಕಾರ್ಯದರ್ಶಿ ರಾಜು ತಾಳಿಕೋಟೆ, ಸಹಕಾರ್ಯದರ್ಶಿ ಅಖಿಲೇಶ್ ಕುರುಡಿ, ಖಜಾಂಚಿ ಶರಣಬಸವ, ಉಪಾಧ್ಯಕ್ಷ ಭೀಮರಾಯ ಸೀತಾಮನಿ, ಶಶಿಕಲಾ ಪಾಟೀಲ್ ಎಂ.ಎ.ಎಚ್ ಮುಖೀಮ್, ಸಂಘಟನಾ ಕಾರ್ಯದರ್ಶಿ ಸಂದೀಪ್, ನಿಕಟಪೂರ್ವ ಅಧ್ಯಕ್ಷ ಎಚ್ ಶರ್ಪುದ್ದೀನ್ ಕಾನೂನು ಸಲಹೆಗಾರರಾದ ಲಕ್ಷ್ಮೀದೇವಿ, ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮನೋಜ್ ಕುಮಾರ್ ಮಿಶ್ರಾ ಕಾರ್ಯದರ್ಶಿಗಳು ಅನಿಲ್ ಕುಮಾರ ಎಚ್ ಉಪಸ್ಥಿತರಿದ್ದರು.

