ಮನವಿ : ಧರ್ಮವು ಒಂದು ನಡಾವಳಿಯೆ ಹೊರತು ಅದು ನಂಬಿಕೆಯಲ್ಲ. ಪರಸ್ಪರ ಧರ್ಮಗಳನ್ನು ದ್ವೇಷಿಸದೆ ಪ್ರೀತಿ, ಸಹೋದರತೆಯಿಂದ ಸರ್ವಧರ್ಮಗಳನ್ನು ಗೌರವಿಸುವ ವ್ಯಕ್ತಿಯೆ ವಿಶ್ವಮಾನವನಾಗಲು ಸಾಧ್ಯ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೆಚ್ ಶಿವರಾಮೇಗೌಡ ಬಣದ ತಾಲೂಕ ಅಧ್ಯಕ್ಷ ನರಸಿಂಹ ಹೆಚ್ ಹೇಳಿದರು.

ಪಟ್ಟಣದ ಕೋನಾಪುರ ಪೇಟೆ ಪ್ರೌಢಶಾಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಪರ ಸಂಘಟನೆಗಳ ಒಕ್ಕೂಟ ವತಿಯಿಂದ ಹಮ್ಮಿಕೊಂಡಿದ್ದ ಮಹಾಕವಿ ಕುವೆಂಪು ಜನ್ಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆ ನಿವೃತ್ತ ವೀರನಗೌಡ ಪೊಲೀಸ್ ರವರು ಮಾತನಾಡಿ
ಅನಾದಿ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಬೇರೂರಿರುವ ವರ್ಣಾಶ್ರಮ ವ್ಯವಸ್ಥೆ ದೇಶದ ಪ್ರಗತಿಗೆ ಮಾರಕವಾಗಿದೆ. ಎಲ್ಲಿಯವರೆಗೂ ಈ ಜಾತಿ ವ್ಯವಸ್ಥೆ ಜೀವಂತ ಇರೋವರೆಗೂ ಅಸಮಾನತೆ, ಹಿಂಸೆ, ಅತ್ಯಾಚಾರವನ್ನು ಕಾಣಬಹುದಾಗಿದೆ. ಇಂತಹ ಜಾತಿ ವ್ಯವಸ್ಥೆ, ಮೂಢನಂಬಿಕೆ ಮತ್ತು ಕಂದಾಚಾರಗಳ ಬಗ್ಗೆ ತಮ್ಮ ಲೇಖನಿ ಮೂಲಕ ವಿರೋಧಿಸಿದ ರಾಷ್ಟಕವಿ ಕುವೆಂಪು ಅವರು ಶೂದ್ರ ವರ್ಗದ ಕವಿಯಾಗಿ ಹೊರಹೊಮ್ಮಿದ್ದರು. ಜಾತಿ, ಮೌಢ್ಯತೆ ಮತ್ತು ಅಂದಕಾರದ ಅಂಕುಶದಿಂದ ಹೊರಬಂದು ನಿರಂಕುಶಮತಿಗಳಾಗಿ ಎಂದು ಸಂದೇಶ ನೀಡಿದ ಮಹಾನ ಕವಿ ಕವೆಂಪು ಅವರು ಎಂದರು.

ಇದೆ ವೇಳೆ ಸರ್ಕಾರಿ ಪ್ರೌಡಶಾಲೆ ವತಿಯಿಂದ ವೇದಿಕೆಯ ಮೇಲಿನ ಎಲ್ಲಾ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂಧರ್ಬದಲ್ಲಿ
ಯಲ್ಲಪ್ಪ ನಿಲಗಲ್ ತಾಲೂಕು ಗೌರವ ಅಧ್ಯಕ್ಷರು,
ದೀಪಕ್ ಯಾದವ್ ತಾಲೂಕು ಪ್ರಧಾನ ಕಾರ್ಯದರ್ಶಿಗಳು,
ಪತ್ರಕರ್ತ ಸಂಘದ ಅಧ್ಯಕ್ಷ ಅಶೋಕ್ ತಡ್ಕಲ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಅಧ್ಯಕ್ಷ ಶರಣಬಸವ ನೀರಮಾನ್ವಿ, ಉಪಾಧ್ಯಕ್ಷ ಗೂಳಪ್ಪ ಬೊಮ್ಮನಾಳ,
ನಾಗರಾಜ್ ಶೆಟ್ಟಿ ಬಿಜೆಪಿ ಮುಖಂಡರು,
ರವಿಕುಮಾರ್ ಮದ್ಲಾಪುರ್ ತಾಲೂಕು ಉಪಾಧ್ಯಕ್ಷರು,
ಶಾಂತಕುಮಾರ್ ನಗರ ಘಟಕ ಗೌರವ ಅಧ್ಯಕ್ಷರು,
ಮಹೇಂದ್ರ ನಾಯಕ್ ನಗರ ಘಟಕ ಅಧ್ಯಕ್ಷರು ,
ಸಿದ್ದಪ್ಪ ಮದ್ರಾಪುರ್,
ಸನತ್ ಕುಮಾರ್ ಕುಮಾರ್,
ನವೀನ್ ಕುಮಾರ್,
ಶ್ರೀನಿವಾಸ್, ರಬ್ಬಣಕಲ್ ,
ತಾಯಪ್ಪ,
ದೇವರಾಜ್,
ವಿನಯ್ ಕುಮಾರ್ ಬಿ ಎಂ,
ಅಂಜಿ ಯಾದವ್ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *