ರಾಯಚೂರು:ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ
2024-25ನೇ ಸಾಲಿನ ಜಿಲ್ಲೆಯ ಸಮಗ್ರ ಚಟುವಟಿಕೆಗಳ ಅಭಿವೃದ್ಧಿಯನ್ನು ಪರಿಗಣಿಸಿ ರಾಯಚೂರು ಜಿಲ್ಲೆಗೆ ಕಲಬುರಗಿ ವಿಭಾಗೀಯ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವುದಕ್ಕೆ ಪ್ರೋ.ಕೆ ಶಿವಶಂಕರ್ ಪರ್ಯಾಯ ಪಾರಿತೋಷಕ ಪ್ರಶಸ್ತಿಯನ್ನು ಮಾನ್ಯ ಶ್ರೀ ಪಿ.ಜಿ.ಆರ್ ಸಿಂಧ್ಯ ರಾಜ್ಯ ಮುಖ್ಯ ಆಯುಕ್ತರು ಇವರು ನೀಡಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ಶ್ರೀ ಬಸವರಾಜ ಬೋರೆಡ್ಡಿ ಜಿಲ್ಲಾ ಮುಖ್ಯ ಆಯುಕ್ತರು, ಶ್ರೀ ಬಸವರಾಜ ಗದಗಿನ ಜಿಲ್ಲಾ ಆಯುಕ್ತರು (ಸ್ಕೌ), ಶ್ರೀಮತಿ ರಾಜಶ್ರೀ ಸಜ್ಜನ್ ಜಂಟಿ ಕಾರ್ಯದರ್ಶಿಗಳು (ಗೈ), ಶ್ರೀಮತಿ ರಜನಿ.ಡಿ ರಾಜ್ಯ ಪರಿಷತ್ ಸದಸ್ಯರು (ಗೈ), ಶ್ರೀ ಬೀರಪ್ಪ ಶಂಭೋಜಿ ಸಹಾಯಕ ಜಿಲ್ಲಾ ಆಯುಕ್ತರು (ಸ್ಕೌ), ಶ್ರೀ ಮಲ್ಲಪ್ಪ ಕುಂಬಾರ ಸಹಾಯಕ ಜಿಲ್ಲಾ ಆಯುಕ್ತರು ಇವರು ಪ್ರಶಸ್ತಿಯನ್ನು ಸ್ವೀಕರಿಸಿದರು.

