ಸಿಂಧನೂರು : ಜಮಾಅತೆ ಇಸ್ಲಾಮಿ ಹಿಂದ್ (JIH) ನ ವಿದ್ಯಾರ್ಥಿನಿಯರ ಅಂಗಸಂಸ್ಥೆಯಾಗಿರುವ Girls Islamic Organisation (ಜಿಐಒ) ಸಿಂಧನೂರು ಘಟಕದ ವತಿಯಿಂದ 2026ನೇ ಅವಧಿಗೆ ಅಧ್ಯಕ್ಷೆಯಾಗಿ ಸಹೋದರಿ ನೆಹಾ ಸಮ್ರೀನ್ (ಆಲಿಮಾ) ಅವರನ್ನು ಆಯ್ಕೆ ಮಾಡಲಾಗಿದೆ.
Girls Islamic Organisation ಒಂದು ಮೌಲ್ಯಾಧಾರಿತ ಹಾಗೂ ಸಮಾಜಮುಖಿ ವಿದ್ಯಾರ್ಥಿನಿಯರ ಸಂಘಟನೆಯಾಗಿದ್ದು, ವಿಶೇಷವಾಗಿ ಯುವತಿಯರು ಮತ್ತು ವಿದ್ಯಾರ್ಥಿನಿಯರ ನಡುವೆ ಸಮಾಜದ ಪುನರ್ ನಿರ್ಮಾಣ, ನೈತಿಕ ಜಾಗೃತಿ ಹಾಗೂ ತಪ್ಪು ಪ್ರವೃತ್ತಿಗಳ ತಡೆಗಟ್ಟುವಿಕೆಗಾಗಿ ಕಾರ್ಯನಿರ್ವಹಿಸುತ್ತಿದೆ. ಸಂಘಟನೆಯ ಪ್ರಧಾನ ಸತ್ಕಾರ್ಯಕ್ಕೆ ಪ್ರೇರೇಪಿಸಿ ದುಷ್ಕಾರ್ಯದಿಂದ ತಡೆಹಿಡಿಯುವ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದೆ.
ಅಲ್ಲಾಹ್‌ನ ಕೃಪೆಯಿಂದ ಜಿಐಒ ಸಂಸ್ಥೆ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಹಾಗೂ ಸ್ಥಳೀಯ ಮಟ್ಟಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.
ಜಿಐಒ ತನ್ನ ಸೇವೆಯನ್ನು ಸಂಘಟನೆ ಮತ್ತು ತರಬೇತಿ, ಶಿಕ್ಷಣ, ಸಾತ್ವಿಕ ಸಮಾಜ ಮತ್ತು ಸಾಮಾಜಿಕ ಸೇವೆ ಎಂಬ ವಿವಿಧ ವಿಭಾಗಗಳ ಮೂಲಕ ವಿಸ್ತರಿಸಿದೆ.
ಗಮನಾರ್ಹವಾಗಿ, ಸಹೋದರಿ ನೆಹಾ ಸಮ್ರೀನ್ ಅವರು ಕಳೆದ ಅವಧಿಯಲ್ಲಿಯೂ ಜಿಐಒ ಸಿಂಧನೂರು ಘಟಕದ ಅಧ್ಯಕ್ಷೆಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದು, ಸಂಘಟನೆಯ ಕಾರ್ಯಕ್ರಮಗಳನ್ನು ಶಿಸ್ತಿನೊಂದಿಗೆ ನಡೆಸಿ, ಯುವತಿಯರಲ್ಲಿ ನಾಯಕತ್ವ, ನೈತಿಕತೆ ಹಾಗೂ ಸಂಘಟನಾತ್ಮಕ ಜಾಗೃತಿಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸಮರ್ಪಿತ ಸೇವೆ ಮತ್ತು ಕಾರ್ಯಕ್ಷಮತೆಯನ್ನು ಪರಿಗಣಿಸಿ, 2026ನೇ ಅವಧಿಗೂ ಅವರನ್ನು ಮರು ಆಯ್ಕೆ ಮಾಡಲಾಗಿದೆ.
ಅವರ ನಾಯಕತ್ವದಲ್ಲಿ ಸಂಘಟನೆ ಮತ್ತು ತರಬೇತಿ ವಿಭಾಗದ ಮೂಲಕ ಕಾರ್ಯಕರ್ತೆಯರ ನೈತಿಕ ಹಾಗೂ ಮೌಲ್ಯಾಧಾರಿತ ತರಬೇತಿಗೆ,
ಚಟುವಟಿಕೆಗಳ ಮೂಲಕ ಸೌಹಾರ್ದ ಹಾಗೂ ಸಂವಾದ ಕಾರ್ಯಕ್ರಮಗಳಿಗೆ,
ಶಿಕ್ಷಣ ವಿಭಾಗದ ಮೂಲಕ ಶಾಲಾ–ಕಾಲೇಜುಗಳಲ್ಲಿ ಮಾರ್ಗದರ್ಶನ ಮತ್ತು ಪ್ರತಿಭಾ ಅನ್ವೇಷಣೆಗೆ,
ಮತ್ತು ಸಾಮಾಜಿಕ ಸೇವಾ ವಿಭಾಗದ ಮೂಲಕ ಬಡವರು, ಅನಾಥರು ಹಾಗೂ ವೃದ್ಧರಿಗೆ ನೆರವು ನೀಡುವ ಸೇವಾ ಕಾರ್ಯಗಳಿಗೆ ನಿರಂತರವಾಗಿ ಒತ್ತು ನೀಡುತ್ತಿದೆ.
ಅಲ್ಲಾಹ್ ಸಹೋದರಿ ನೆಹಾ ಸಮ್ರೀನ್ ಅವರಿಗೆ ಸ್ಥಿರತೆ (ಇಸ್ತಿಕಾಮತ್), ನಿಷ್ಠೆ (ಇಖ್ಲಾಸ್) ಹಾಗೂ ಕಾರ್ಯಸಾಮರ್ಥ್ಯವನ್ನು ದಯಪಾಲಿಸಲಿ. ಅವರ ಮುಂದಾಳತ್ವದಲ್ಲಿ ಜಿಐಒ ಸಿಂಧನೂರು ಘಟಕವು ಇನ್ನಷ್ಟು ಬಲಿಷ್ಠವಾಗಿ ಕಾರ್ಯನಿರ್ವಹಿಸಿ, ಯುವತಿಯರ ಶೈಕ್ಷಣಿಕ, ಸಾಮಾಜಿಕ ಮತ್ತು ನೈತಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿ ಎಂದು ಪ್ರಾರ್ಥಿಸಲಾಗಿದೆ.

