ನಾಡು ಕಂಡ ಸರ್ವಶ್ರೇಷ್ಠ, ರಾಷ್ಟ್ರಕವಿ, ಜಗದಕವಿ ಕುವೆಂಪು ಅವರ 120ನೇ ಜನ್ಮದಿನಾಚರಣೆಯನ್ನು, ಮುದುಗಲ್ ಪಟ್ಟಣದ ಕಿಲ್ಲಾದಲ್ಲಿರುವ ಸಹನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇಂದು ಹಮ್ಮಿಕೊಳ್ಳಲಾಯಿತು.
ಕುವೆಂಪುರವರ ಭಾವಚಿತ್ರಕ್ಕೆ, ಶಾಲೆ ಶಿಕ್ಷಕಿಯರಾದ ಕವಿತಾ ಮತ್ತು ಪ್ರಿಯಾಂಕ ಪೂಜೆ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಆದಪ್ಪ ಅವರು ಮಾತನಾಡಿ ಪರಿಸರ, ಕೃಷಿ, ಮಹಿಳೆ ಮೊದಲಾದ ಹಲವು ಆಯಾಮಗಳನ್ನು ಒಳಗೊಂಡ ಕಾದಂಬರಿ ,ನಾಟಕ ,ಶಿಶು ಸಾಹಿತ್ಯ, ಕವನ ಸಂಕಲನ ಹೇಗೆ ಸಾಹಿತ್ಯದ ಎಲ್ಲಾ ನೆಲೆಗಳನ್ನು ಕುವೆಂಪು ರವರ ಕೃತಿಗಳಲ್ಲಿ ಕಾಣಬಹುದು ಎಂದು ತಿಳಿಸಿದರು. ಶಾಲೆಯ ವಿದ್ಯಾರ್ಥಿನಿಯರಾದ ಸಹನಾ ಮತ್ತು ಸಿಂಚನ ಮಾತನಾಡಿ, ಕುವೆಂಪುರವರು ಮಹಾನ್ ಚೇತನ ಮತ್ತು ಕನ್ನಡಕ್ಕೆ “ಜ್ಞಾನಪೀಠ ಪ್ರಶಸ್ತಿ “ತಂದುಕೊಟ್ಟ ರಾಷ್ಟ್ರಕವಿ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿಯರಾದ ಆಯಿಷಾ ಬೇಗಮ್, ನಿಲುಬಾಯಿ, ಅಸ್ಮ, ಹೀನಾ ಬೇಗಂ ಉಪಸ್ಥಿತರಿದ್ದರು ಮತ್ತು ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿಯಾದ ಕಾವೇರಿ ಅವರು ನಿರೂಪಿಸಿದರು.

Leave a Reply

Your email address will not be published. Required fields are marked *