ಡಾ. ರಾಜಶೇಖರ್ ಹೆಚ್ ಅವರಿಗೆ “ಆಯುರ್ವೇದ ವಿಶ್ವ ರತ್ನ” ಪ್ರಶಸ್ತಿ ಪ್ರಧಾನ
ಬೆಂಗಳೂರು : ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಲಿಂಗಸಗೂರ ಪ್ರಾಚಾರ್ಯರಾದ ಡಾ. ರಾಜಶೇಖರ್ ಹೆಚ್ ಅವರ 25 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಆಯುರ್ವೇದ ವೈದ್ಯೆರು ಹಾಗೂ ಶಿಕ್ಷಣತಜ್ಞ ಅವರು ಆಯುರ್ವೇದ ಕ್ಷೇತ್ರಕ್ಕೆ ನೀಡಿದ ವಿಶಿಷ್ಟ ಕೊಡುಗೆಗಳನ್ನು ಗುರುತಿಸಿ “ಆಯುರ್ವೇದ ವಿಶ್ವ ರತ್ನ” ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಡಿ 28 ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆದ ಎರಡನೇ ಆಯುರ್ವೇದ ವರ್ಲ್ಡ್ ಸಮ್ಮಿಟ್‌ನಲ್ಲಿ ಈ ಗೌರವ ಪ್ರದಾನ ಮಾಡಲಾಯಿತು. ದೇಶ-ವಿದೇಶಗಳಿಂದ ಆಗಮಿಸಿದ ಗಣ್ಯರು, ಆಯುರ್ವೇದ ತಜ್ಞರು ಹಾಗೂ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಶಸ್ತಿ ವಿತರಿಸಲಾಯಿತು. ಡಾ. ರಾಜಶೇಖರ್ ಹೆಚ್ ಅವರು 15 ವರ್ಷ ಆಯುರ್ವೇದಿಕ್ ಕಾಲೇಜ್ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ , ನಂತರ 10 ವರ್ಷಗಳ ಕಾಲ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ ಇವರು ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಲಿಂಗಸೂರಿನಲ್ಲಿ ಪ್ರಾಚಾರ್ಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದು ಇವರು ಆಯುರ್ವೇದ ಕ್ಷೇತ್ರದಲ್ಲಿ , ಶಿಕ್ಷಣ ಸೇವೆ ಮೂಲಕ ನೀಡಿದ ನಿರಂತರ ಕೊಡುಗೆಗೆ ಆಯುರ್ವೇದ ಶಿಕ್ಷಣವನ್ನು ಉತ್ತೇಜಿಸುವ ಮತ್ತು ಸಹಾನುಭೂತಿಯ ಆರೋಗ್ಯ ರಕ್ಷಣೆಯನ್ನು ನೀಡುವ ಭರವಸೆಯಿಂದ ಗುರುತಿಸಲ್ಪಟ್ಟಿದ್ದಾರೆ. ಅವರ ಈ ಸೇವೆಯನ್ನು ಗುರುತಿಸಿ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ . ಈ ಪ್ರಶಸ್ತಿ ಲಭಿಸಿದ್ದಕ್ಕೆ ಸ್ವಾಮಿ ವಿವೇಕಾನಂದ
ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಧ್ಯಕ್ಷರಾದ ಶಾಂತನಗೌಡ ಪಾಟೀಲ್ ಅವರು ಹಾಗೂ ಆಡಳಿತ ಮಂಡಳಿಯವರು , ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಿಂಧನೂರಿನ ಆಡಳಿತ ಮಂಡಳಿಯವರು, ಸರ್ವೋದಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಮಾನ್ವಿಯ ಆಡಳಿತ ಮಂಡಳಿಯವರು ಅವರ ಸಹೋದ್ಯೋಗಿ ಉಪನ್ಯಾಸಕರು , ಹರ್ಷವನ್ನು ವ್ಯಕ್ತಪಡಿಸಿ ಅಭಿನಂದನೆಯನ್ನು ಸಲ್ಲಿಸಿದರು



