ಕವಿತಾಳ:
ಪಟ್ಟಣದ ಮುಸ್ಲಿಂ ಸಮಾಜದ ಮುಖಂಡ ಬಸವತತ್ವದ ಅನುಯಾಯಿಯಾದ ಶರಣ ಬಿ.ಎ.ಕರೀಂಸಾಬ್ ಅವರ ಕುಟುಂಬದ ವತಿಯಿಂದ ಪ್ರತಿವರ್ಷದಂತೆ ಇ ವರ್ಷವೂಸಹ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಪ್ರಸಾದ ವ್ಯವಸ್ಥೆಯನ್ನು ಕೈಗೊಳ್ಳುವ ಮೂಲಕ ಭಾವಕ್ಯತೆಯನ್ನು ಮೆರೆದಿದ್ದಾರೆ.
`ಸತತವಾಗಿ ಐದು ವಷ್ಗಳಿಂದ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಅನ್ನಪ್ರಸಾದವನ್ನು ಹಮ್ಮಿಕೊಳ್ಳುತ್ತಾಬಂದಿದ್ದು ನಾವೆಲ್ಲರೂ ಒಂದೇ ಎನ್ನುವ ಭಾವನೆ ಮೂಡವುದುರ ಜೊತಡಗಡ ವೈವಿದ್ಯತೆಯಲ್ಲಿ ಎಕತೆಯನ್ನು ಕಾಣುವ ನಾಡು ನಮ್ಮದು ಅದಕ್ಕಾಗಿ ನಮ್ಮ ನಾಡಿನಲ್ಲಿ ನಾವು ಜನಿಸಿದ್ದು ನಮ್ಮ ಪುಣ್ಯವಾಗಿದೆ, ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವ ನುಡಿಯನ್ನು ಸ್ಥತಿಸುವುದರ ಜೊತೆಗೆ ಹಿಂದೂ, ಮುಸ್ಲಿಂ,ಕ್ರೈಸ್ತರು ನಾವೆಲ್ಲರೂ ಸಮಾನತೆಯಿಂದ ನಡೆಯಬೇಕು’ ಎಂದು ಬಿ.ಎ.ಕರೀಮಸಾಬ್ ಹೇಳಿದರು.
ಕವಿತಾಲ, ಪಾತಾಪುರ, ತೋರಣದಿನ್ನಿ ಪೀಠದ ಎಲ್ಲಾ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಪ್ರಸಾದ ಸ್ವೀಕರಿಸುವ ಮೂಲಕ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಿರುವ ಶರಣ ಕರೀಂಸಾಬ್ ಮತ್ತು ಅವರ ಕುಟುಂಬ್ಕಕೆ ಶುಭಹಾರೈಸಿದರು.
ಗುರುಸ್ವಾಮಿ ಚನ್ನಯ್ಯ ಮಂಕಾಲ್, ತೊರಣದಿನನಿಯ ವೆಂಕಟೇಶ್ ಸ್ವಾಮಿ, ಯಮನಪ್ಪ ಸ್ವಾಮಿ, ಭಗವಾನ್ ಸಿಂಗ್ ಸ್ವಾಮಿ ಸಮತೊ಼ಸ್ವಾಮಿ, ಮಲ್ಲಿಕಾರ್ಜುನಸ್ವಾಮಿ, ಆಂಜನೆಯ್ಯಸ್ವಾಮಿ, ಬಸವರಾಜಸ್ವಾಮಿ ಸೇರಿದಂತೆ ಇನ್ನಿತರ ಮಾಲಾಧಾರಿಗಳು ಪ್ರಸಾದವನ್ನು ಸೇವಿಸಿದರು.
ಕರೀಂಸಾಬ್ ಕುಟುಂಬದ ಇರ್ಫಾನ್.ಕೆ, ಎಂ.ಎ.ವಹಾಬ್, ಎಂ.ದಿ.ಕಲೀಮ್ ಸೆರಿದಂತೆ ಕುಟುಂಬ ವರ್ಗದವರು ತಮ್ಮ ಭಕ್ತಿ ಭಾವದಿಂದ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ.

