ದೇವದುರ್ಗ: ಅರಕೇರಿ ತಾಲೂಕಿಗೆ ಬರುವ ಗಲಗ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಹಳ್ಳಿಗಳಿಗೆ ಮಾಜಿ ಸಚಿವ ದೇವದುರ್ಗ ವಿಧಾನ ಸಭಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಕೆ ಶಿವನಗೌಡ ನಾಯಕ ಅವರ 2026 ರ ಹೊಸ ವರ್ಷದ ದಿನಚರಿಯನ್ನು ಮತದಾರರ ಮನೆ ಮನೆಗೆ ಅರಕೇರಿ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಹಾಗೂ ಪ್ರಥಮ ದರ್ಜೆ ಗುತ್ತೇದಾರ ಬಸಣ್ಣ ನಾಯಕ ರಾಮುಲು ನೇತೃತ್ವದಲ್ಲಿ ಬಿಜೆಪಿ ಮುಖಂಡರು ತೆರಳಿ ವಿತರಿಸಿದರು,
ಬಳಿಕ ಬಸಣ್ಣ ನಾಯಕ ರಾಮುಲು ಮಾತನಾಡಿ ದೇವದುರ್ಗಕ್ಕೆ ಶಿವನಗೌಡ ನಾಯಕರಂತಹ ನಾಯಕರು ಬೇಕು. ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿ, ಶಿಕ್ಷಣಕ್ಕಾಗಿ .ಹಳ್ಳಿಗಳ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತರುವ ಮೂಲಕ ಅಭಿವೃದ್ಧಿ ಪಡಿಸಿದ ಮಹಾನಾಯಕ, ನಾವು ಹಿಗಾಗಲೇ ಯಾವುದೇ ಊರಿಗೆ ಹೋದರೂ ಶಾಲೆಯ ಉತ್ತಮ ಕಟ್ಟಡಗಳನ್ನು ನೋಡಬಹುದು, ರಸ್ತೆ ಅಭಿವೃದ್ಧಿ, ತಾಲೂಕಿನ ಪ್ರತಿಯೊಂದು ಹಳ್ಳಿಗಳಲ್ಲಿ ದೇವಸ್ಥಾನ ಅಭಿವೃದ್ಧಿ. ಸಮುದಾಯ ಭವನಗಳು, ಗ್ರಾಮದಲ್ಲಿ ಬೀದಿ ದೀಪಗಳು, ಮನೆ ಇಲ್ಲದವರಿಗೆ ಮನೆ ತಂದು ಅದೆಷ್ಟೋ ಬಡವರಿಗೆ ಮನೆ ನೀಡಿದ್ದಾರೆ. ಅವರು ದೇವದುರ್ಗ ತಾಲ್ಲೂಕಿಗೆ ಮಾಡಿದ ಸಾಧನೆ ಹೇಳ್ತಾ ಹೋದ್ರೆ ಸಾಕಷ್ಟು ಇದಾವೆ, ತಾಲೂಕಿಗೆ ಅನೇಕ ಯೋಜನೆಗಳನ್ನು ತಂದು ಅಭಿವೃದ್ಧಿ ಪಡಿಸಿದ್ದಾರೆ, ಅಂತಹ ಮಹಾನಾಯಕ ಅಭಿವೃದ್ಧಿ ಹರಿಕಾರನ್ನು ಮುಂದಿನ 2028 ರ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ನಾವು ಎಲ್ಲರೂ ಅವರ ಜೊತೆ ಇರೋಣ ಎಂದರು,
ಇದೆ ಸಂದರ್ಭದಲ್ಲಿ ಪಲಕನಮರಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರೇಶ ಊಟಿ, ಸಿದ್ದಣ್ಣ ತಾತ ವಂದಲಿ,ಮಲ್ಲಿಕಾರ್ಜುನ್ ಗೌಡ ವಂದಲಿ. ಭೀಮನಗೌಡ ವಂದಿಲಿ. ರಾಜಶೇಖರ ಪಾಟೀಲ್ ವಂದಿಲಿ. ಶಿವಪುತ್ರ ವಂದಿಲಿ ಸಿದ್ದಣ್ಣ ವಂದಿಲಿ. ಶಶಿಧರ್ ಗೌಡ ಪಲಕನಮರಡಿ. ಸುರೇಶ್ ಗಲಗ,ಪಲಕನಮರಡಿ ಗ್ರಾಮ ಪಂಚಾಯಿತಿ ಸದಸ್ಯ ದೇವರಾಜ ಪಲಕನಮರಡಿ ,ನಾಗರಾಜ್ ಸೌಹುಕಾರ್. ಮಲ್ಲೇಶ್ ನಾಯಕ್. ಕೊಳಕಪ್ಪ ದೇಸಾಯಿ. ಅಂಬಣ್ಣ ಮೂಡಲಗುಂಡ್ಡ. ಅಂಬಣ್ಣ ಊಟಿ. ಶಿವಗೇನಿ ಫಲಕನಮರಡಿ, ಸಿದ್ದಣ್ಣ ಹೊಸೂರು ಸೇರಿದಂತೆ ಅನೇಕರು ಭಾಗವಹಿಸಿದ್ದರು,

