ಮಾನ್ವಿ : ಮಾನ್ವಿ ಪಟ್ಟಣದ ಪ್ರಥಮ ದರ್ಜೆ ಗುತ್ತೇದಾರರು ಕಲ್ಲು ಗಣಿಗಾರಿಕೆಯ ಮಾಲೀಕರು, ದಾರುಸ್ಸಲಾಮ್ ಸಹಕಾರಿ (ಬಡ್ಡಿ ರಹಿತ) ಬ್ಯಾಂಕಿನ ಅಧ್ಯಕ್ಷರು, ಸಮಾಜ ಸೇವಕರಾದ ಸೈಯದ್ ಅಕ್ಬರ್ ಪಾಶ ಇವರು ತಮ್ಮ ಹಿರಿಯ ಸುಪುತ್ರನ ವಲಿಮಾ ಸಮಾರಂಭದಲ್ಲಿ 101 ಮುಸ್ಲಿಂ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿದ್ದಾರೆ, ನಗರದಲ್ಲಿ ಉಚಿತ ಮುಸ್ಲಿಂ ಸಾಮೂಹಿಕ ವಿವಾಹ ಕಾರ್ಯಕ್ರಮ. ಜನೆವರಿ 18 ರಂದು, ಅಕ್ಬರಿ ಮಸೀದಿ ಮಾನ್ವಿ ಆವರಣದಲ್ಲಿ , ಏರ್ಪಡಿಸಲಾಗಿದ್ದು . ಈ ಸಾಮೂಹಿಕ ವಿವಾಹ ಕಾರ್ಯಕ್ರದಲ್ಲಿ ವಿವಾಹ ಮಾಡಿಕೊಳ್ಳಲು ಅಥವಾ ಪಾಲುಗೊಳ್ಳುಲು ಆಸಕ್ತಿ ಉಳ್ಳವರು ಜನೆವರಿ 05 ಕೊನೆಯ ದಿನವಾಗಿದೆ, ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ. ಈ ಸಮಾಜಮುಖಿಯ ಉತ್ತಮ ಕಾರ್ಯಕ್ರಮವನ್ನು ಎಲ್ಲರೂ ಬೆಂಬಲಿಸಿ ಯಶಸ್ವಿಯಾಗಲು ಸಹಕರಿಸಬೇಕು,
ಏಕೆಂದರೆ ಹಣ ಆಸ್ತಿ ಅಂತಸ್ತು ಕೆಲವು ಜನರು ಮಾತ್ರ ಗಳಿಸುತ್ತಾರೆ ಆದ್ರೆ ಸಮಾಜಕ್ಕಾಗಿ ಈ ರೀತಿಯ ಕಾರ್ಯಕ್ರಮ ಮಾಡುವುದು ಅಪರೂಪ. ಹಣ ಗಳಿಸಿ, ಗಳಿಸಿದ ಹಣವನ್ನು ಪುಣ್ಯದ ಕಾರ್ಯದಲ್ಲಿ ಖರ್ಚು ಮಾಡುವುದು ತೀರಾ ಕಡಿಮೆ, ಇವರು ರಾಯಚೂರು ಜಿಲ್ಲೆಯ ಹಲವು ಮಸೀದಿ ಮದರಸಾಗಳಿಗೆ ಏರ್ ಕೂಲರ್, ಫ್ಯಾನ್, ಇನ್ನಿತರೇ ರೂಪದಲ್ಲಿ ದೇಣಿಗೆ ಕೊಟ್ಟಿದ್ದಾರೆ ಹಾಗೂ ವಿಧುವೆಯರಿಗೆ, ಅಂಗವಿಕಲರಿಗೆ ವಯಸ್ಸಾದ ಹಿರಿಯ ನೂರಾರು ಜನರಿಗೆ ಮಾಶಾಸನ (ಪಿಂಚಣಿ) ಕೊಡ್ತಾರೆ ಸರ್ವ ಧರ್ಮದ ಹಲವು ಸಂಘಟನೆಗಳಿಗೂ ದೇಣಿಗೆ ನೀಡಿರುತ್ತಾರೆ ಎಂದು ತಿಳಿದಿದೆ, ಇದರಿಂದ ಇವರ ಹೆಸರು ಹೆಚ್ಚಾಗಿದೆ, ಹಣ ಮತ್ತು ಹೆಸರು ಮಾಡಿದಾಗ, ಆರೋಪ ಅಪವಾದ, ಪರ ವಿರೋಧ ಬರೋದು ಸಹಜ, ಆದರೂ ಅದನ್ನೆಲ್ಲ ಲೆಕ್ಕಿಸದೆ ತಮ್ಮ ಸೇವಾ ಕಾರ್ಯಕ್ರಮಗಳನ್ನು ಮುಂದುವರಿಸಿದ್ದು ಅಕ್ಬರ್ ಪಾಶ ಅವರ ಕಾರ್ಯ ಮೆಚ್ಚಲೇಬೇಕು.
ಹಲವಾರು ಜನ ತಮ್ಮ ಬದುಕು ಕಟ್ಟಿಕೊಳ್ಳಲು ಮಾನ್ವಿಗೆ ಬಂದು ಸಾಕಷ್ಟು ಬೆಳೆದಿದ್ದಾರೆ, ಆದ್ರೆ ಅಕ್ಬರ್ ಪಾಶ ಮಾತ್ರ ಮಾನ್ವಿ ನೆಲದ ಋಣ ತೀರಿಸುತ್ತಿದ್ದಾರೆ ಎಂಬುದು ನನ್ನ ಅಭಿಪ್ರಾಯ.
ಮೂಲತಃ ಕೊಪ್ಪಳ ಜಿಲ್ಲೆಯವರಾದ ಇವರು ಸುಮಾರು 30 ವರ್ಷಗಳಿಂದ ನಮಗೆ ಗೊತ್ತು, ರಾಯಚೂರಿನ ಪ್ರಿಂಟಿಂಗ್ ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದ ಅಕ್ಬರ್ ಪಾಶ ತುಂಬಾ ಕಷ್ಟದಿಂದ ಬೆಳೆದಿದ್ದು ನೋಡಿದ್ದೇವೆ, ಅಕ್ಬರ್ ಪಾಶ ಅವರೊಂದಿಗೆ ನಮಗೆ ಯಾವುದೇ ತರಹದ ವ್ಯವಹಾರ, ಸಂಪರ್ಕ ಇಲ್ಲದಿದ್ದರೂ ಸಹ ಅವರ ಚಟುವಟಿಕೆಗಳು ತಿಳಿದಿದೆ.
ಅದೇನೇ ಇರಲಿ, ಈ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬೆಂಬಲಿಸೋಣ. ಹೊಗಳುವವರೆಲ್ಲಾ ಮಿತ್ರರಲ್ಲ,
ತೆಗಳುವವರೆಲ್ಲಾ ಶತ್ರುಗಳಲ್ಲ.
ಮುಂದಿನ ದಿನಗಳಲ್ಲಿ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹಗಳು ಏರ್ಪಡಿಸುವಂತಾಗಲಿ ಎಂದು ಹಾರೈಸುವೆ, ಶುಭವಾಗಲಿ.
ಎಸ್. ಹೆಚ್.ಸಾಜಿದ್ ಖಾದ್ರಿ, ಮಾನ್ವಿ.

