ತಾಲೂಕಿನ ಸಿದ್ದಪರ್ವತ ಬಗಳಾಮುಖಿ ಅಂಬಾಮಠದ ಅಂಬಾದೇವಿ ಜಾತ್ರೆ ಜ.2 ರಿಂದ ಪ್ರಾರಂಭವಾಗಲಿದ್ದು,
ಬಹಳ ವಿಶೇಷವಾಗಿ ಜ.3 ರಂದು ನಡೆವ ರಥೋತ್ಸವ ಹಾಗೂ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆಗಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರು, ಶಾಸಕರು, ಈ ಭವ್ಯವಾದ ಕಾರ್ಯಕ್ರಮಕ್ಕೆ ಆಗಮಿಸಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಕೋಟೆ ಈರಣ್ಣ ದೇವಸ್ಥಾನದಲ್ಲಿ ಶನಿವಾರ ಅಂಬಾದೇವಿ ಜಾತ್ರೆಯ ಪೂರ್ವಭಾವಿ ಸಭೆ ನೇತ್ರತ್ವ ವಹಿಸಿ ಮಾತನಾಡಿದ ಅವರು, ವಿವಿಧ ಇಲಾಖೆಗಳ ಅನುದಾನದಲ್ಲಿ ಅಭಿವೃದ್ಧಿ ಕೆಲಸಗಳ ಶಂಕು ಸ್ಥಾಪನೆ, ಉದ್ಘಾಟನೆ ಮಾಡುವರು, ರಥೋತ್ಸವ ಬೀದಿ, ಜಾತ್ರೆಗಳಲ್ಲಿ 800 ವ್ಯಾಪಾರಸ್ಥರಿಗೆ ಅಂಗಡಿ ವ್ಯವಸ್ಥೆ, 15 ಕೋಟಿ ವೆಚ್ಚದಲ್ಲಿ ಗರ್ಭಗುಡಿ ಹಾಗೂ ಮಂಟಪ ಮುಕ್ತಾಯಗೊಳ್ಳಲಿದೆ.
ಜ.2 ರಿಂದ 6 ರವರೆಗೆ 5 ದಿನಗಳ ಕಾಲ ರಾಜ್ಯದ
ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅಂಬಾದೇವಿ ಜಾತ್ರೆಯ ನಿಮಿತ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ 15 ಉಚಿತ ಬಸ್ ವ್ಯವಸ್ಥೆಯು ಮಾಡಲಾಗಿದೆ. ಇದರ ಸದುಪಯೋಗ ಪಡಿಸಿಕೊಳ್ಳಬೇಕು. ನಾಲೈದು ರಾಜ್ಯಗಳಿಂದ ಐದಾರು ಲಕ್ಷ ಭಕ್ತರು ಅಂಬಾದೇವಿ ಜಾತ್ರೆಗೆ ಆಗಮಿಸುವ ನಿರೀಕ್ಷೆಯಿದೆ. ಕಾರಣ ತುಂಬಾ ಅಚ್ಚುಕಟ್ಟಾಗಿ ಅದ್ದೂರಿಯಾಗಿ ಜರುಗುವಂತೆ ನೋಡಿಕೊಳ್ಳುವ ಜವಬ್ದಾರಿ ಅಧಿಕಾರಿಗಳು ಮತ್ತು ನಮ್ಮೆಲ್ಲರ ಮೇಲಿದೆ ಎಂದರು.
ಈ ವೇಳೆ: ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಬಾಬುಗೌಡ ಬಾದರ್ಲಿ, ಸದಸ್ಯರಾದ ಖಾಜಿ ಮಲ್ಲಿಕ್, ವೈ.ನರೇಂದ್ರನಾಥ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಸವರಾಜ ಹಿರೇಗೌಡ, ವೈ.ಅನಿಲಕುಮಾರ, ಕಾಂಗ್ರೆಸ್ ಮುಖಂಡರಾದ ತಿಮ್ಮಪ್ಪನಾಯಕ, ಮರಿಯಪ್ಪ, ಪಕ್ಷದ ಮುಖಂಡರು, ಸೇರಿದಂತೆ ನೂರಾರು ಕಾರ್ಯಕರ್ತರು, ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದರು.

