ತಾಲೂಕಿನ ಮುಳ್ಳೂರು, ಮಲ್ಲಾಪುರ, ಗ್ರಾಮದಲ್ಲಿ ಕೇಂದ್ರ ಸರ್ಕಾರದ ಹೊಸ ಕಾಯ್ದೆಯಾದ ನರೇಗಾ ಕಾರ್ಮಿಕರು ಸುಟ್ಟು ಹಾಕಿದರು. ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣವಾಗಿ ಮುಚ್ಚುವ ಹುನ್ನಾರ ಮಾಡುತ್ತಿದೆ ಎಂದು ಉದ್ಯೋಗ ಖಾತ್ರಿ ಕಾರ್ಮಿಕರು, ರೈತರು, ಆಕ್ರೋಶಗೊಂಡರು.
ವಿಬಿ-ಜಿ.ಆರ್.ಎ.ಎಮ್.ಜಿ ಶಾಸನವು ಉದ್ಯೋಗದ ಶಾಸನಬದ್ದ ಹಕ್ಕನ್ನು ನಿರಾಕರಿಸುತ್ತದೆ. ವಿತ್ತೀಯ ಒಕ್ಕೂಟ ವ್ಯವಸ್ಥೆಯನ್ನು ಹಾಳುಮಾಡುತ್ತದೆ. ಜಿಎಸ್ಟಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ರಾಜ್ಯಗಳ ತೆರಿಗೆ ಅಧಿಕಾರವನ್ನು ಮರುಸ್ಥಾಪಿಸಬೇಕು. ತೆರಿಗೆ ಸಂಗ್ರಹದಲ್ಲಿ ರಾಜ್ಯಗಳಿಗೆ ಪಾಲನ್ನು ಶೇ.60 ರಷ್ಟು ಹೆಚ್ಚಿಸಬೇಕು.
ದೇಶದಲ್ಲಿ ಬರುವ ಆದಾಯ ಕೇಂದ್ರಕ್ಕೆ ಹೊರಟಿದೆ ಬಡವರ ಉದ್ಯೋಗ ಖಾತ್ರಿ ರಾಜ್ಯ ಶೇ. 40 ರಷ್ಟು, ಕೇಂದ್ರ ಶೇ. 60 ರಷ್ಟು ಹಣ ಒದಗಿಸಬೇಕೆಂಬ ಹೊಸ ಕಾಯ್ದೆಯನ್ನು ಡಿಸೆಂಬರ್ 15 ರಂದು ಮಾಡಿದೆ.
20 ವರ್ಷಗಳಿಂದ ಉದ್ಯೋಗ ಖಾತ್ರಿಯ ಹಣ ಕೇಂದ್ರ ಸರ್ಕಾರವೆ ಕೊಟ್ಟಿದೆ. ಈಗ ಏಕಾಏಕಿ ಈ ರೀತಿ ಮಾಡಿ ಉದ್ಯೋಗವನ್ನ ಮುಚ್ಚಾವ ಮಾಸ್ಟರ್ ಪ್ಲಾನ್ ಕೇಂದ್ರ ಸರ್ಕಾರ ಮಾಡುತ್ತಿದೆ. ಈ ಹೊಸ ಕಾಯ್ದೆಯನ್ನು ಎಲ್ಲಾ ರೈತರು ಕೃಷಿಯಲ್ಲಿ ಕೆಲಸ ಮಾಡುವರು ವಿರೋಧಿಸಬೇಕಿದೆ ಎಂದು ಬಸವಂತರಾಯಗೌಡ ಕಲ್ಲೂರು, ಯಂಕೋಬ ಕುರುಬರು, ವಿರುಪಾಕ್ಷಗೌಡ, ನಾಗೇಶಗೌಡ, ಹೇಳಿದರು.
ಈ ವೇಳೆ: ಮಲ್ಲಾಪುರದ ಗಿರಿಜಮ್ಮ ನಾಯಕ, ಶೃತಿ ಮೇಟಿ, ಪಾರ್ವತಿ ಕುಂಬಾರ, ಮಲ್ಲಪ್ಪ ಬೆಟ್ಟಪ್ಪ, ನಾಗಮ್ಮ ಭಂಡಾರಿ ನಾಗವೇಣಿ ಹಾಗೂ ಮುಳ್ಳೂರು ಗ್ರಾಮದ ಅನುಸೂಯಮ್ಮ, ಖಾಜಾಬಿ, ನಾಗಮ್ಮ ಗೌಡ್ರು, ನೀಲಮ್ಮ ಮರಿಯಪ್ಪ ಹುಲ್ತಿಗಪ್ಪ, ಸೇರಿದಂತೆ ನೂರಾರು ರೈತರಿದ್ದರು.

