ಮಾನ್ವಿ: ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ವಿಶೇಷ ಶೈಕ್ಷಣಿಕ ಚಟುವಟಿಕೆಯೊಂದು ಜರುಗಿತು. ಮಾನ್ವಿ ತಹಸೀಲ್ದಾರ್ ಆದ ಭೀಮರಾಯ ರಾಮು ಸಮುದ್ರ ಅವರು ಶಾಲಾ ಭೇಟಿ ನೀಡಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಗಮನ ಸೆಳೆದರು.

ತಹಸೀಲ್ದಾರ್ ಅವರು ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದರು. ಹತ್ತನೇ ತರಗತಿಯ ಕನ್ನಡ ವಿಷಯದ ಪ್ರಮುಖ ಪದ್ಯವಾದ ‘ಕೆಮ್ಮನೆ ಮಿಸೆವೊತ್ತೆನೇ’ ಭಾಗವನ್ನು ವಿದ್ಯಾರ್ಥಿಗಳಿಗೆ ಬಹಳ ಆಸಕ್ತಿದಾಯಕವಾಗಿ ವಿವರಿಸಿದರು. ಪದ್ಯದ ಸಾರಾಂಶ ಮತ್ತು ಅದರ ಹಿಂದಿನ ಆಶಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ನಂತರ ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಸಿದ್ಧತೆಯ ಬಗ್ಗೆ ಚರ್ಚಿಸಿದ ಅವರು, ಪರೀಕ್ಷೆಯ ಭಯವನ್ನು ಬಿಟ್ಟು ಆತ್ಮವಿಶ್ವಾಸದಿಂದ ಸಿದ್ಧರಾಗಬೇಕು ಮತ್ತು ಅಭ್ಯಾಸದ ಅವಧಿಯಲ್ಲಿ ಸಮಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಮೂಲ್ಯವಾದ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಶಾಲೆಯ ಉಪ ಪ್ರಾಂಶುಪಾಲರಾದ ಸುಧಾಕರ ಸಂಜೀವ, ರೇಖಾದೇವಿ, ಬಂಡೆಮ್ಮ, ಅಶೋಕ್ ಕುಮಾರ್ ಮಳ್ಳಿ,ಮಂಜುಳಾ ಹಿರೇಮಠ, ರಜನಿ, ಶೇಖ್ ಹುಸೇನ್, ಚನ್ನಬಸವರಾಜ, ಪ್ರಮೋದ ಕುಮಾರ, ಶ್ರೀಮತಿ ಕಟ್ಟಿ, ನುಜಹತ್ ಫಾತಿಮಾ, ಶರಣಮ್ಮ, ಜಯಭೀಮ ಭಾವಿಕಟ್ಟಿ, ಈರಾಮಣಿ,ಶರತ್ ಕುಮಾರ್, ರಾಜಶೇಖರ. ಎಚ್, ರೇಣುಕಾ ಇದ್ದರು.

Leave a Reply

Your email address will not be published. Required fields are marked *