ಸಿರವಾರ, ಡಿ.26– ಪಟ್ಟಣ ಪಂಚಾಯತಿಯ 14ನೇ ವಾರ್ಡಿನ ಸದಸ್ಯರಾದ ಅಜೀತಕುಮಾರ್ ಹೊನ್ನಟಿಗಿ ಹಾಗೂ ಅವರ ಸಹೋದರ ಅನೀಲ್ ಕುಮಾರ್ ಹೊನ್ನಟಿಗಿ ವಕೀಲರು ಅವರಿಂದ ಇತ್ತೀಚೆಗೆ ಜಿಲ್ಲಾ ಹಾಗೂ ತಾಲೂಕು ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಗೊಂಡ ಪತ್ರಕರ್ತರಿಗೆ ಶುಕ್ರವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ರಾಯಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಜಿಲ್ಲಾ ಕಾರ್ಯಕಾರಣಿ ಸಮಿತಿ ಸದಸ್ಯರಾಗಿ ಗೆಲುವುವಸಾಧಿಸಿದ ಸಿರವಾರ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರೂ ಆದ ಎಂ.ಗುಂಡಪ್ಪ, ತಾಯಪ್ಪ ಬಿ. ಹೊಸೂರು, ಸಿರವಾರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಹನುಮೇಶ, ಪ್ರಧಾನ ಕಾರ್ಯದರ್ಶಿ ನಾಗರಾಜ ಕರಿಬಿಲ್ಕರ್, ಉಪಾಧ್ಯಕ್ಷ ಮಹ್ಮದ್ ಸಾಬ, ಖಜಾಂಚಿ ಮೌನೇಶ ಪಾಟೀಲ್, ಕಾರ್ಯದರ್ಶಿ ಮಹೇಶ ಪಾಟೀಲ್, ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯಕುಮಾರ್ ಎಸ್, ಲಕ್ಷ್ಮಣ ಪೋತಾಪೂರು, ಮಾನ್ವಿ ತಾಲೂಕು ಘಟಕದ ಅಧ್ಯಕ್ಷರಾದ ಅಶೋಕ ತಡಕಲ್, ಸದಸ್ಯರಾದ ಅಜಯಕುಮಾರ್ ಸೇರಿದಂತೆ ಎಲ್ಲಾ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಲಾಯಿತು.
ನಂತರ ಪಟ್ಟಣ ಪಂಚಾಯತ್ ಸದಸ್ಯ ಅಜಿತ್ ಕುಮಾರ ಹೊನ್ನಟಗಿ ಅವರು ಮಾತನಾಡಿ, “ಸಮಾಜದ ಧ್ವನಿಯಾಗಿ ಕಾರ್ಯನಿರ್ವಹಿಸುವ ಪತ್ರಕರ್ತರ ಸೇವೆ ಅಮೂಲ್ಯ. ಅವರ ಕಾರ್ಯಕ್ಕೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ಮಾಜಿ ಅಧ್ಯಕ್ಷ ಮೂಕಪ್ಪ ಕಟ್ಟಿಮನಿ, ಮಾರೇಪ್ಪ, ಚನ್ನಪ್ಪ ಬೂದಿನಾಳ, ನದೀಮ್ ಪಾಷ, ಜಯರಾಜ್, ಪಾರ್ಥ, ಮೇಷಕ್ ದೊಡ್ಮನೆ, ಅಮರೇಶ ಚೌದರಿ, ಸುರೇಶ್ ಕಾತರಕಿ, ಈರೇಶ್ ಹರವಿ, ಅಮರೇಶ ಹಿರೆಬಾದರದಿನ್ನಿ, ನಿರಂಜನ, ಕನ್ಯಾಕುಮಾರ ಹೊನ್ನಟಗಿ, ಮುತ್ತಣ್ಣ ಚಾಗಬಾವಿ, ಹುಲಿಗೆಪ್ಪ ಯಾಕ್ಲಾಸಪುರ, ವಿಜಯ ಪ್ರಕಾಶ್, ಮಲ್ಲಿಕಾರ್ಜುನ ಅತ್ತನೂರ್, ವೀರೇಶ್ ಗಣದಿನ್ನಿ, ವಿರುಪಾಕ್ಷಿ ಹಳ್ಳಿಹೋಸೂರು, ಪ್ರಭಾಕರ, ಸುಂದರ ರಾಜ್, ವೀರೇಶ್ ಹರವಿ, ವೀರೇಶ್ ಗಣದಿನ್ನಿ, ವಿಜಯ ಪ್ರಕಾಶ್, ವೀರೇಶ್ ಗಣದಿನ್ನಿ, ವೀರೇಶ್ ಗಣದಿನ್ನಿ, ವೀರೇಶ್ ಗಣದಿನ್ನಿ, ವಿರುಪಾಕ್ಷಿ ಹಳ್ಳಿಹೋಸೂರು, ಪ್ರಭಾಕರ, ಸುಂದರ ರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *