ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಲಿಂಕ್ ಗಳಿಗೆ ಸ್ಪಂದಿಸಬೇಡಿ ಕಾನೂನು ಪಾಲನೆಗೆ ಸಾರ್ವಜನಿಕರ ಸಹಕಾರವು ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ತಿಳಿಸಿದರು.
ಶುಕ್ರವಾರ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಡೆದ ಅಪರಾಧ ತಡೆ ಮಾಸಾಚರಣೆ ಕುರಿತು ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡದ ಹಾಗೂ ಲೈಸೆನ್ಸ್ ಇಲ್ಲದ ಮೂವರು ಕುಳಿತು ಬೈಕ್ ಚಲಾಯಿಸುವುದು, ಹಾಗೂ ವಿಮೆ ನವೀಕರಣ ಆಗದಿರುವುದು, ಮದ್ಯಪಾನ ಸೇವಿಸಿ ಬೈಕ್ ಚಾಲನೆ ಸೇರಿದಂತೆ 150ಕ್ಕೂ ಅಧಿಕ ಬೈಕ್ ಗಳನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.
ಪ್ರತಿಯೊಬ್ಬರೂ ಕೂಡ ಕಡ್ಡಾಯವಾಗಿ ಹೆಲ್ಮೆಟ್ ಹಾಕಿಕೊಳ್ಳಬೇಕು ಒಂದು ಬಾರಿ ಹೋದ ಜೀವ ಮರಳಿ ಬಾರದು ಮತ್ತು ಸೈಬರ್ ವಂಚನೆಗೆ ಒಳಗಾಗದಿರಿ, ನಿಮಗೆ ಎಲ್ಲಿಯಾದರೂ ಅನುಮಾನಸ್ಪದ ಕಂಡು ಬಂದಲ್ಲಿ ಪೊಲೀಸರ ಗಮನಕ್ಕೆ ತರಬೇಕು. 80 ಕಿ.ಮೀ. ವೇಗದಲ್ಲಿ ಓಡಿಸಬೇಡಿ ಮತ್ತು ಪಾಲಕರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ವಾಹನ ಚಲಾಯಿಸುವುದಕ್ಕೆ ಬಿಡಬೇಡಿ ಇದು ಅಪರಾಧ ಈ ಬಾರಿ ಕೇವಲ ದಂಡ ಹಾಕಿ ಎಚ್ಚರಿಕೆ ಕೊಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ತಿದ್ದಿಕೊಳ್ಳದಿದ್ದಲ್ಲಿ ಕಡ್ಡಾಯವಾಗಿ
ಪ್ರಕರಣ ದಾಖಲಿಸುತ್ತೆವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ: ಡಿವೈಎಸ್ಪಿ ಚಂದ್ರಶೇಖರ್ ಜಿ, ಪಿಐ ವೀರಾರೆಡ್ಡಿ, ಸಂಚಾರಿ ಪಿಎಸ್‌ಐ ಚಂದ್ರಶೇಖರ್ ಹಿರೇಮಠ ಇದ್ದರು. ಜಾಗೃತಿ ಮೂಡಿಸುವ ಕರ ಪತ್ರವನ್ನು ಪೊಲೀಸರೊಂದಿಗೆ ಸಮಾಜದ ಮುಖಂಡರು, ಪತ್ರಕರ್ತರು, ಭಾಗವಹಿಸಿ ಬಿಡುಗಡೆಗೊಳಿಸಿದರು.

