ಸಿಂಧನೂರು: ಇಂದು ನಗರದ ಬಪ್ಪುರು ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಸದಾನಂದ ಮಹಾರಾಜ್ ರವರ ನೇತೃತ್ವದಲ್ಲಿ ಶ್ರೀಮಾತೆ ಶಾರದಾದೇವಿಯವರ ಪ್ರೀತ್ಯರ್ಥವಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ “ಅಖಂಡ ಶ್ರೀಲಲಿತಾಸಹಸ್ರನಾಮವನ್ನು” ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಿರಂತರವಾಗಿ 12 ಗಂಟೆಗಳ ಕಾಲ ಮಹಿಳಾ ಭಕ್ತರು ಪಾರಾಯಣ ಮಾಡಿದರು.. ಕಾರ್ಯಕ್ರಮದಲ್ಲಿ ನಾಗವೇಣಿ ವನಿತಾ ಮಹಾಲಕ್ಷ್ಮಿ ನೀಲಮ್ಮ ಅಲಬನೂರ ಶ್ವೇತ, ಅಂಜಲಿ ರಾಧಿಕಾ ಅಶ್ವಿನಿ ಜ್ಯೋತಿ ಮಹಾಲಕ್ಷ್ಮಿ ಶೃತಿ ಸುಮಾ ವಿಜಯಲಕ್ಷ್ಮಿ ನೇತ್ರಾವತಿ ರೇಣುಕಾ ಬಸಮ್ಮ ಪದ್ದಮ್ಮ ಇತರರು ಭಾಗವಹಿಸಿದ್ದರು..

Leave a Reply

Your email address will not be published. Required fields are marked *