ಸಿಂಧನೂರು : ಡಿ 26 ನಗರದ ಎಕೆ ಗೋಪಾಲ್ ನಗರದಲ್ಲಿ ನಗರ ಮಂಡಲ ವತಿಯಿಂದ ದೇಶ ಕಂಡ ಶ್ರೇಷ್ಠ ಮಾಜಿ ಪ್ರಧಾನಿ ಖ್ಯಾತ ವಾಗ್ಮಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ಎಕೆ ಗೋಪಾಲ್ ನಗರ ಶಾಲೆಯಲ್ಲಿ ಸಸಿ ನೀಡುವ ಕಾರ್ಯಕ್ರಮದಲ್ಲಿ ನಮ್ಮ ಯುವ ನಾಯಕರಾದ ಶ್ರೀ ಕೆ. ರಾಜಶೇಖರ ರವರು ಹಾಗೂ ನಗರ ಮಂಡಲದ ಅಧ್ಯಕ್ಷರಾದ ಶ್ರೀಸಿದ್ದರಾಮೇಶ ಮನ್ನಾಪುರು ರವರು ಭಾಗವಹಿಸಿ ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮುರುಗೇಶ್ ಹಿರೇಮಠ, ಶಾಲಾ ಮುಖ್ಯ ಶಿಕ್ಷಕರಾದ ವಿಜಯಲಕ್ಷ್ಮಿ, ಮಹಿಳಾ ಮಂಡಲದ ಅಧ್ಯಕ್ಷರಾದ ಶಿವಮ್ಮ, ಮುಖಂಡರಾದ ಮಹಾದೇವ ನಾಯಕ, ಸಿದ್ದಲಿಂಗಯ್ಯ ಸ್ವಾಮಿ ವಕೀಲರು,ಸಂಗಪ್ಪ,ಪಕೀರಪ್ಪ ಬಾಗೋಡಿ, ಜಗದೀಶ್, ರಮೇಶ್, ಮೌನೇಶ್ ಹೊಸಮನಿ,ಮುತ್ತು ಬರ್ಸಿ, ಮಲ್ಲಿಕಾರ್ಜುನ ಕಾಟಿಗಲ್, ನಾಗರಾಜ್ ದೇವರಗುಡಿ,ಯಮನಮ್ಮ ಹಾಗೂ ಶಾಲಾ ಆಡಳಿತ ಮಂಡಳಿ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *