ಮಾನ್ವಿ : ತಾಲೂಕಿನ ಗ್ರಾಮೀಣ ಪ್ರದೇಶದ ಸರಕಾರಿ ಕನ್ನಡ ಶಾಲೆಗಳಲ್ಲಿ ಅಭ್ಯಾಸ ಮಾಡಿದ ಅಪ್ಪಟ ಹಳ್ಳಿಯ ಯುವಕರು ರಾಯಚೂರಿನಲ್ಲಿ ನಡೆದ ಅಗ್ನಿವೀರ್ ಸೇನಾ ನೇಮಕಾತಿಯಲ್ಲಿ ನೇಮಕವಾಗಿ ತಾಲೂಕಿನ ಹಾಗೂ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳ ಘನತೆ ಹೆಚ್ಚಿಸಿದ್ದಾರೆ ಸರಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಈಗ ಈ ಯುವಕರು ಪ್ರತಿಷ್ಠಿತ ಸರಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಪದವಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಈ ಯುವಕರು ಅಭ್ಯಾಸದ ಜೊತೆಗೆ ವ್ಯವಸಾಯದಲ್ಲಿಯೂ ಕೂಡ ತಂದೆಯವರ ಜೊತೆಗೆ ಸಹಾಯ ಮಾಡು ತ್ತಿದ್ದರು. ಸೈನಿಕ ಹುದ್ದೆಗೆ ನೇಮಕವಾದ ಯುವಕರು ಚೆನ್ನಬಸವ ನಾಯಕ ಬ್ಯಾಗವಾಟ,ರಾಮಚಂದ್ರ ಕನ್ನೇರಿ ನೀರಮಾನ್ವಿ, ಭೀಮಣ್ಣ ನಾಯಕ ರಾಜಲದಿನ್ನಿ, ಶಿವಕುಮಾರ ನಾಯಕ ನಕ್ಕುಂದಿ, ಯಲ್ಲಪ್ಪ ಕರಡಿ ಆಲ್ದಾಳ ಹಾಗೂ ಬೀರಪ್ಪ ಕೊರವಿ ಈ ಎಲ್ಲಾ ಹಳ್ಳಿಯ ಯುವಕರು ಕಠಿಣ ಪೂರ್ವ ತರಬೇತಿ ಅತ್ಯಂತ ಯಶಸ್ವಿಗೊಳಿಸಲೆಂದು ಮಾನ್ವಿ ತಾಲೂಕಿನ ದೇಶಭಕ್ತರು ತಾಲೂಕ ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಆಂಜನೇಯ ನಸಲಾಪುರ ಹಾಗೂ ಅಂಬಣ್ಣ ನಾಯಕ ಗುಜ್ಜಲ್ ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಬೇಡರ ಸಮಿತಿ ಬೆಂಗಳೂರು ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರು ‌ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *