ಮಾನ್ವಿ: ಪಟ್ಟಣದ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘ ಮಾನ್ವಿ ವತಿಯಿಂದ 2 ನೇ ವರ್ಷದ ಶ್ರೀ ರಾಘವೇಂದ್ರಸ್ವಾಮಿ ಮಠ ಮಂತ್ರಾಲಯಕ್ಕೆ ಪಾದಯಾತ್ರೆಯನ್ನು ಮಾನ್ವಿ ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಿAದ ಜ.10 ರಂದು ಬೆಳಿಗ್ಗೆ 6-30 ರಿಂದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಶ್ರೀ ನಗರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಗೋಪೂಜೆ ಯೊಂದಿಗೆ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಚೀಕಲಪರ್ವಿಯ ಶ್ರೀ ರುದ್ರಮುನೀಶ್ವರ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಾದಯಾತ್ರೆಯಲ್ಲಿ ತಾಲೂಕಿನ ಎಲ್ಲಾ ಸಮಾಜದವರು ಭಕ್ತಿ ಶ್ರೇದ್ದೆಯಿಂದ ಭಾಗವಹಿಸಬಹುದಾಗಿದ್ದು ಆಸಕ್ತರು ತಮ್ಮ ಹೆಸರುಗಳನ್ನು ಜ.5 ರೋಳಗಾಗಿ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಬಿ.ಈರಣ್ಣ ಶೆಟ್ಟಿ, ದೂ ಸಂಖ್ಯೆ 9845561501, ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಆರ್.ಮುತ್ತುರಾಜ್ ಶೆಟ್ಟಿ ದೂ 9845688088 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
