ಮಾನ್ವಿ : ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ. ಹಂಪಯ್ಯ ನಾಯಕ ಹಾಗೂ ರಾಜ್ಯ ಯುವ ಮುಖಂಡರಾದ ರವಿ ಬಸರಾಜು ಪಟ್ಟಣದ ಲೊಯೋಲಾ ಶಾಲೆಗೆ ಭೇಟಿ ನೀಡಿ ಕ್ರೈಸ್ತ ಬಾಂಧವರಿಗೆ ಕ್ರಿಸ್‌ಮಸ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.
ಈ ವೇಳೆ ಮಾತನಾಡಿದ ಅವರು, ಕ್ರಿಸ್‌ಮಸ್ ಹಬ್ಬವು ಪ್ರೀತಿ, ಸಹೋದರತ್ವ ಹಾಗೂ ಮಾನವೀಯ ಮೌಲ್ಯಗಳ ಸಂದೇಶವನ್ನು ನೀಡುವ ಹಬ್ಬವಾಗಿದ್ದು, ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಬೆಳೆಸುವಲ್ಲಿ ಇಂತಹ ಹಬ್ಬಗಳ ಪಾತ್ರ ಮಹತ್ವದ್ದೆಂದು ಹೇಳಿದರು. ಎಲ್ಲಾ ಧರ್ಮಗಳ ಹಬ್ಬಗಳನ್ನು ಒಂದೇ ಮನೋಭಾವದಿಂದ ಆಚರಿಸುವ ಮೂಲಕ ಸೌಹಾರ್ದತೆಯ ನಾಡನ್ನು ಮತ್ತಷ್ಟು ಬಲಪಡಿಸಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಗಫೊರ್ ಸಾಬ್, ಪಂಚ ಗ್ಯಾರೆಂಟಿಗಳ ಅಧ್ಯಕ್ಷರಾದ ಬಿ.ಕೆ. ಅಮರೇಶಪ್ಪ, ಮುಖಂಡರಾದ ಖಾಲಿದ್ ಸಾಹೇಬ್, ಬಾಲಸ್ವಾಮಿ ಕೊಡ್ಲಿ, ರೌಡರ್ ಸ್ವಾಮಿ, ಸುಭಾಸ್ ನಾಯಕ್, ಜಿ. ನಾಗರಾಜ್ ಸೇರಿದಂತೆ ಅನೇಕ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

