ಮಾನ್ವಿ : ಪಟ್ಟಣದ ಕೋನಾಪುರ ಪೇಟೆಯಲ್ಲಿನ ಸೇಂಟ್ ಮೇರಿಸ್ ಚರ್ಚ್ನಲ್ಲಿ ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೇಂಟ್ ಮೇರಿಸ್ ಚರ್ಚ್ನ ಫಾ. ಸುರೇಶ್ ವಿನ್ಸೆಂಟ್ ಹಾಗೂ ಫಾದರ್ ವಸಂತ್ ರವರಿಗೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕ್ರಿಸ್‌ಮಸ್ ಹಬ್ಬದ ಶುಭಾಶಯವನ್ನು ಕೋರಿ ಮಾತನಾಡಿ ಕ್ರಿಸ್‌ಮಸ್ ಹಬ್ಬವು ಶಾಂತಿ, ಪ್ರೀತಿ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಮಹತ್ವದ ಹಬ್ಬವಾಗಿದ್ದು, ಎಲ್ಲ ಧರ್ಮಗಳ ನಡುವೆ ಸೌಹಾರ್ದತೆ ಮತ್ತು ಸಹಬಾಳ್ವೆಯನ್ನು ಬಲಪಡಿಸುತ್ತದೆ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದ ತಾ. ಅಧ್ಯಕ್ಷರಾದ ಈರಣ್ಣ ಮರ್ಲಟ್ಟಿ, ಹಿರಿಯ ಪುರಸಭೆ ಸದಸ್ಯರಾದ ರಾಜಾ ಮಹೇಂದ್ರ ನಾಯಕ, ತಾಲೂಕು ಜೆಡಿಎಸ್. ರೈತ ಘಟಕದ ಅಧ್ಯಕ್ಷರಾದ ಶರಣಪ್ಪ ಗೌಡ ಮದ್ಲಾಪುರ, ಪುರಸಭೆ ಸದಸ್ಯರಾದ ಬಾಷಾ ಸಾಬ್, ಶರಣಪ್ಪ ಮೇದಾ, ಜೆಡಿಎಸ್ ತಾಲೂಕು ಮಹಾ ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ ವಕೀಲರು, ನಗರ ಘಟಕದ ಅಧ್ಯಕ್ಷರಾದ ಹೆಚ್. ಮೌನೇಶ್ ಗೌಡ, ಖಲೀಲ್ ಖುರೇಷಿ, ಮೌಲಾ ಸಾಬ್ ಸೇರಿದಂತೆ ಇನ್ನಿತರರು ಇದ್ದರು.
ಮಾನ್ವಿ : ಪಟ್ಟಣದ ಕೋನಾಪುರ ಪೇಟೆಯಲ್ಲಿನ ಸೇಂಟ್ ಮೇರಿಸ್ ಚರ್ಚ್ನಲ್ಲಿ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಕ್ರಿಸ್‌ಮಸ್ ಹಬ್ಬದಶುಭಾಶಯವನ್ನು ಕೋರಿದರು.

Leave a Reply

Your email address will not be published. Required fields are marked *