ನಿರ್ಮಲ ತುಂಗಭದ್ರಾ ಅಭಿಯಾನ ಸಿಂಧನೂರು ತಾಲೂಕಿಗೆ ಡಿಸೆಂಬರ್ 28ಕ್ಕೆ ಪ್ರವೇಶ ಮಾಡಲಿದ್ದು, ಅಂಬಾಮಠ, ಗೋರೆಬಾಳ, ಸಿಂಧನೂರು, ಹಾಗೂ ಜವಳಗೇರಾದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.

ತುಂಗಭದ್ರಾ ಜಲಾಶಯ ಹಾಗೂ ಕಾಲುವೆ ನೀರು ಕಲುಷಿತಗೊಂಡಿದ್ದು, ಕುಡಿಯಲು ಯೋಗ್ಯವಾಗಿಲ್ಲ. ಇದರಿಂದಾಗಿ ಜಲಜಾಗೃತಿ, ಜನ ಜಾಗೃತಿ, ರಾಷ್ಟ್ರೀಯ ಸ್ವಾಭಿಮಾನ ನವದೆಹಲಿ ಪರ್ಯಾವರಣ ಟ್ರಸ್ಟ್
ಶಿವಮೊಗ್ಗ, ನಿರ್ಮಲ ತುಂಗಭದ್ರಾ ಸಮಿತಿ ಕರ್ನಾಟಕ ಮೂರನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.

ಈ ಆಂದೋಲನ ಪಾದಯಾತ್ರೆ ದಿನಾಂಕ ಡಿಸೆಂಬರ್ 28 ರಂದು ಸಿಂಧನೂರು ತಾಲೂಕಿನಲ್ಲಿ ಪ್ರವೇಶ ಮಾಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದರು.

Leave a Reply

Your email address will not be published. Required fields are marked *