ತಾಳೆಕೋಟಿ: ತಾಲೂಕು ಪಂಚಾಯತ್ ವತಿಯಿಂದ ವಿಕಲಚೇತನರಿಗೆ 2024 ನೇ ಸಾಲಿನ ಅನುದಾನದ ಮೂರು ತ್ರಿಚಕ್ರ ವಾಹನಗಳನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಅಪ್ಪಾಜಿ ನಾಡಗೌಡರು ಫಲಾನುಭವಿಗಳಿಗೆ ಮಂಗಳವಾರ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇವತ್ತು ತಾಲೂಕ ಪಂಚಾಯತ್ ವತಿಯಿಂದ 2024ನೇ ಸಾಲಿನ ಅನುದಾನದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಮಂಜೂರಾದ ಮೂರು ತ್ರಿಚಕ್ರ ವಾಹನಗಳ ಪೈಕಿ ವುಳಿದ ವಾಹನಗಳನ್ನು ವಿತರಿಸಿದ್ದೇನೆ ಇದರ ಸದ್ಬಳಕೆಯನ್ನು ಅವರು ಮಾಡಿಕೊಳ್ಳಬೇಕೆಂದು ತಿಳಿಸುತ್ತೇನೆ ಎಂದರು.ಈ ಸಮಯದಲ್ಲಿ ಜಿಲ್ಲಾ ಪಂಚಾಯತ್ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ತಾಪಂ ಇಓ ಅನುಸೂಯಾ ಚಲವಾದಿ, ಮುಖಂಡರಾದ ಸಿದ್ದನಗೌಡ ಪಾಟೀಲ ನಾವದಗಿ, ಪ್ರಭುಗೌಡ ಮದರಕಲ್ಲ, ಸಂಗಮೇಶ ದೇಸಾಯಿ, ರೋಷನ್ ಡೋಣಿ, ಸಂಗನಗೌಡ ಅಸ್ಕಿ, ಆರೀಫ ಕೆಂಭಾವಿ,ತಾಪಂನ ಬಸನಗೌಡ ಚೌಧರಿ, ಮಹಾಂತಗೌಡ ದೊರೇಗೋಳ ಹಾಗೂ ಸಿಬ್ಬಂದಿಗಳು ಇದ್ದರು.

