ಸಿಂಧನೂರು: ಇಂದು ನಗರದ ಬಪ್ಪುರು ರಸ್ತೆಯಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಶ್ರೀ ಸ್ವಾಮಿ ಸದಾನಂದ ಮಹಾರಾಜ್ ರವರ ನೇತೃತ್ವದಲ್ಲಿ ಶ್ರೀಮಾತೆ ಶಾರದಾದೇವಿಯವರ ಪ್ರೀತ್ಯರ್ಥವಾಗಿ ಹಾಗೂ ಲೋಕಕಲ್ಯಾಣಾರ್ಥವಾಗಿ “ಅಖಂಡ ಶ್ರೀಲಲಿತಾಸಹಸ್ರನಾಮವನ್ನು” ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಿರಂತರವಾಗಿ 12 ಗಂಟೆಗಳ ಮಹಿಳಾ ಭಕ್ತರು ಪಾರಾಯಣ ಮಾಡಿದರು.. ಕಾರ್ಯಕ್ರಮದಲ್ಲಿ ನಾಗವೇಣಿ ವನಿತಾ ಮಹಾಲಕ್ಷ್ಮಿ ನೀಲಮ್ಮ ಅಲಬನೂರ ಶ್ವೇತ, ಅಂಜಲಿ ರಾಧಿಕಾ ಅಶ್ವಿನಿ ಜ್ಯೋತಿ ಮಹಾಲಕ್ಷ್ಮಿ ಶೃತಿ ಸುಮಾ ವಿಜಯಲಕ್ಷ್ಮಿ ನೇತ್ರಾವತಿ ರೇಣುಕಾ ಬಸಮ್ಮ ಪದ್ದಮ್ಮ ಇತರರು ಭಾಗವಹಿಸಿದ್ದರು..

