**ಕುರ್ಡಿ ಗ್ರಾಮದ ರೈತರಿಗೆ ಹತ್ತಿ ಕಟ್ಟಿಗೆ ಚೇದಕ ಯಂತ್ರದ ಪ್ರಾತ್ಯಕ್ಷಿಕೆ
ಹಾಗೂ ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕದ ಸಮಗ್ರ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆ**
ಮಾನ್ವಿ: ತಾಲೂಕಿನ ಕುರ್ಡಿ ಗ್ರಾಮದ ವೃತ್ತದಲ್ಲಿನ ಪ್ರಗತಿ ಪರ ರೈತ ವೆಂಕಟೇಶರೆಡ್ಡಿ ರವರ ಜಮೀನಿನಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕುರ್ಡಿ ರೈತ ಸಂಪರ್ಕ ಕೇಂದ್ರ ಸಂಯುಕ್ತಾಶ್ರಯದಲ್ಲಿ ನಡೆದ ಹತ್ತಿ ಕಟ್ಟಿಗೆ ಛೇದಕ ಯಂತ್ರದ ಪ್ರಾತ್ಯಕ್ಷಿಕೆ ಹಾಗೂ ಹತ್ತಿಯಲ್ಲಿ ಗುಲಾಬಿ ಕಾಯಿ ಕೊರಕದ ಸಮಗ್ರ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆ ಕುರಿತು ನಡೆದ ಕಾರ್ಯಕ್ರಮದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ತಿಮ್ಮಣ್ಣ ಮಾತನಾಡಿ ಅಖಿಲ ಭಾರತ ಹತ್ತಿ ಸಂಶೋಧನ ಕೇಂದ್ರ ನಾಗಪುರ್ ವತಿಯಿಂದ ಕೃಷಿ ವಿಜ್ಞಾನ ಕೇಂದ್ರಕ್ಕೆ ಅತಿ ಸಾಂದ್ರತೆ ಹತ್ತಿ ಬೆಳೆ ವಿಧಾನದ ಕುರಿತು ಪರಿಶೀಲನೆಗಾಗಿ ರಾಜ್ಯದ ರಾಯಚೂರು ಕೃಷಿ ವಿಜ್ಞಾನ ಕೇಂದ್ರ ಹಾಗೂ ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಯೋಜನೆಯನ್ನು ನೀಡಿದ್ದು ಈ ಅಧಿಕ ಸಾಂದ್ರತೆ ಹತ್ತಿ ಬೆಳೆ ಪದ್ದತಿಯಲ್ಲಿ ಅಧಿಕ ಸಾಂದ್ರತೆ ಹತ್ತಿ ಬೆಳೆ ಪದ್ದತಿಗೆ ಸೂಕ್ತವಾದ ಹತ್ತಿ ಬೀಜಗಳನ್ನು ಗಿಡದಿಂದ ಗಿಡಕ್ಕೆ 150 ಸೆ,ಮಿ. ಹತ್ತಿರದಲ್ಲಿ ಬೀಜಗಳನ್ನು ನಾಟಿ ಮಾಡುವುದರಿಂದ 120 ದಿನಗಳಲ್ಲಿ ಹತ್ತಿ ಬೆಳೆಯಲ್ಲಿ ಎರಡು ಬಾರಿ ಹತ್ತಿಯನ್ನು ಬಿಡಿಸಿಕೊಳ್ಳಬಹುದು ಕಡಿಮೆ ಸಮಯದಲ್ಲಿ ಹತ್ತಿ ಬೆಳೆ ಅವಧಿ ಮುಗಿಯುವುದರಿಂದ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕಾದ ಬಾದೆಯನ್ನು ತಪ್ಪಿಸಬಹುದು. ಈ ಪದ್ದತಿಯಲ್ಲಿ ಬೆಳೆದ ಹತ್ತಿ ಬೆಳೆಗೆ ಚಾಮತ್ಕರ ದ್ರಾವಣವನ್ನು ಸಿಂಪಡಿಸಿ ಹತ್ತಿಗಿಡ ಎತ್ತರ ಬೆಳೆಯುವುದನ್ನು ತಡೆಯುವುದರಿಂದ ಬೆಳೆಗೆ ನಾವು ನೀಡುವ ಎಲ್ಲಾ ಪೋಷಕಾಂಶಗಳು ಸಮಗ್ರವಾಗಿ ಹತ್ತಿ ಗಿಡಕ್ಕೆ ತಲುಪಿ ಹೆಚ್ಚು ಗುಣಮಟ್ಟದ ಹತ್ತಿ ಕಾಯಿಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ,ಹತ್ತಿ ಬೆಳೆಗೆ ನೀಡುವ ನೀರಿನ ಹಾಗೂ ಗೋಬ್ಬರ,ಸಮಯದ ಉಳಿತಾಯವಾಗುವುದರೊಂದಿಗೆ ಕಳೆದ ಬಾರಿ ರೈತ ವೆಂಕಟರೆಡ್ಡಿಯವರು ಎಕರೆಗೆ 18 ಕ್ವಿಂಟಾಲ್ ವರೆಗೆ ಕಡಿಮೆ ಕೃಷಿ ವೆಚ್ಚದಲ್ಲಿ ಹೆಚ್ಚಿನ ಇಳುವರಿಯನ್ನು ಪಡೆದಿರುವುದನ್ನು ಕಾಣಬಹುದಾಗಿದೆ ಮುಂದಿನ ಬೆಳೆಗಳಾದ ಕಡ್ಲೆ ,ಸೇರಿದಂತೆ ವಿವಿಧ ಬೆಳೆಗಳನ್ನು ಪಡೆಯಬಹುದು. ಈ ಪದ್ದತಿ ಅಳವಡಿಸಿಕೊಳ್ಳುವ ರೈತರಿಗೆ ಎಕರೆಗೆ 4 ಸಾವಿರದವರೆಗೆ ಸಹಾಯಧಾನ ಕೂಡ ದೊರೆಯುತ್ತದೆ. ರೈತರು ಹತ್ತಿಬೆಳೆಯಲ್ಲಿ ಹತ್ತಿ ಇಳುವರಿಯನ್ನು ಪಡೆದನಂತರ ಉಳಿಯುವ ಹತ್ತಿ ಕಟ್ಟಿಗೆ ತ್ಯಾಜ್ಯವನ್ನು ಬೆಂಕಿ ಇಟ್ಟು ಸುಡುವುದರಿಂದ ಭೂಮಿಯಲ್ಲಿರುವ ಬೆಳೆಗಳಿಗೆ ಉಪಕಾರಿಯಾಗಿರುವ ಅನೇಕ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ ಹಾಗೂ ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ , ಮೋನಾಕ್ಸಯಡ್ ಹೆಚ್ಚಿನ ಪ್ರಮಾಣದಲ್ಲಿ ಸೇರಿ ವಾಯು ಮಾಲಿನ್ಯ ಉಂಟಾಗುವುದರಿಂದ ಅನೇಕ ಶ್ವಾಸಕೋಶ ಕ್ಯಾನ್ಸರ್ ರೋಗಗಳು ಉಂಟಾಗುತ್ತವೆ ಅದ್ದರಿಂದ ರೈತರು ಹತ್ತಿ ಛೇದಕಗಳನ್ನು ಬಳಸಿ ಹತ್ತಿ ಕಟ್ಟಿಗೆಯನ್ನು ಪುಡಿ ಮಾಡಿ ಮರಳಿ ಭೂಮಿಗೆ ಸೇರಿಸುವುದರಿಂದ ಭೂಮಿಯ ಫಲವತ್ತಾತೆಯನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕುರ್ಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಶಿವಶಂಕರ ಮಾತನಾಡಿ ಕೃಷಿ ಇಲಾಖೆಯಿಂದ ರೈತರಿಗೆ ಅಧುನಿಕ ಯಂತ್ರಿಕೃತ ಕೃಷಿಗೆ ಅಗತ್ಯವಿರುವ ಯಂತ್ರೋಪಕರಣಗಳನ್ನು ಸಹಾಯಧನದಡಿಯಲ್ಲಿ ಖರೀದಿ ಮಾಡುವುದಕ್ಕೆ ಅವಕಾಶವಿದೆ ,ರೈತರಿಗೆ ಅಗತ್ಯವಿರುವ ಕೃಷಿ ಪರಿಕಾರಗಳು ಹಾಗೂ ಕೃಷಿ ಕುರಿತು ಅಗತ್ಯ ಮಾಹಿತಿಯನ್ನು ರೈತರು ಪಡೆದುಕೊಂಡು ಕಡಿಮೆ ಕೃಷಿ ವೆಚ್ಚದಲ್ಲಿ ಅಧಿಕ ಇಳುವರಿಯನ್ನು ಪಡೆಯುವ ಮೂಲಕ ರೈತರು ತಮ್ಮ ಕೃಷಿ ಅದಾಯದವನ್ನು ದ್ವಿಗುಣ ಮಾಡಿಕೊಳ್ಳುವಂತೆ ತಿಳಿಸಿದರು.
ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೀಟಶಾಸ್ತçಜ್ಞರಾದ ಡಾ.ಶ್ರೀವಾಣಿ ರೈತರಿಗೆ ಗುಲಾಬಿ ಕಾಯಿಕೊರಕದ ಸಮಗ್ರ ನಿರ್ವಹಣೆ ಕುರಿತು ಅಗತ್ಯ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳಾದ ಡಾ.ಉಮೇಶ, ಡಾ.ಆಸ್ಸನ, ಕುರ್ಡಿ ರೈತ ಸಂಪರ್ಕ ಕೇಂದ್ರದ ಅತ್ಮಯೋಜನೆಯ ಕೃಷಿ ತಾಂತ್ರಿಕ ವ್ಯವಸ್ಥಾಪಕರಾದ ಫಯಾಜ್ ಜಾಲಾಲ್, ಹುಲಿಗೆಪ್ಪ, ಲಕ್ಷ್ಮಣ ಗೋರ್ಕಾಲ್, ಕೃಷಿ ಸಖೀ ದೇವಮ್ಮ , ಗ್ರಾಮದ ರೈತರಾದ ಮನೋಜಗೌಡ, ಮಾರೇಶ, ಯಲ್ಲಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿ ಕೃಷಿ ವಿಜ್ಞಾನಿಗಳಿಂದ ಮಾಹಿತಿ ಪಡೆದುಕೊಂಡರು.
ಮಾನ್ವಿ: ತಾಲೂಕಿನ ಕುರ್ಡಿ ಗ್ರಾಮದ ವೃತ್ತದಲ್ಲಿನ ಪ್ರಗತಿ ಪರ ರೈತ ವೆಂಕಟೇಶರೆಡ್ಡಿ ರವರ ಜಮೀನಿನಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ಇಲಾಖೆಯಿಂದ ಹತ್ತಿ ಛೇದಕ ಯಂತ್ರದ ಕುರಿತು ಪ್ರಾತ್ಯಕ್ಷಿಕೆ ನೀಡಲಾಯಿತು.
ಮಾನ್ವಿ: ತಾಲೂಕಿನ ಕುರ್ಡಿ ಗ್ರಾಮದ ವೃತ್ತದಲ್ಲಿನ ಪ್ರಗತಿ ಪರ ರೈತ ವೆಂಕಟೇಶರೆಡ್ಡಿ ರವರ ಜಮೀನಿನಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ತಿಮ್ಮಣ್ಣ ಅಧಿಕ ಸಾಂದ್ರತೆ ಹತ್ತಿ ಬೆಳೆ ಪದ್ದತಿ ಕುರಿತು ಮಾಹಿತಿ ನೀಡಿದರು.

