ಶ್ರೀ ಮುರಹರಿ ಗೆಳೆಯರ ಬಳಗದ ವತಿಯಿಂದ ಕಾರ್ತಿಕ ಮಾಸದ ಶ್ರೀ ಮುರಹರಿ ಜಾತ್ರಾ ಮಹೋತ್ಸವದ ಅಂಗವಾಗಿ ಮೊದಲ ಬಾರಿಗೆ ಗ್ರಾಮೀಣ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯನ್ನು ಮುಕುಂದ ಗ್ರಾಮದಲ್ಲಿ ಭವ್ಯವಾಗಿ ಆಯೋಜಿಸಲಾಯಿತು. ಉದ್ಘಾಟನೆಯನ್ನು ಗ್ರಾಮ ಮುಖಂಡರಾದ ಶ್ರೀ ರುದ್ರಮುನಿ ಹಿರೇಮಠ ಅವರು ನೆರವೇರಿಸಿದ್ದು, ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ ಶ್ರೀ ರಾಜುಗೌಡರು ಕಬಡ್ಡಿ ಪಂದ್ಯಾವಳಿಯನ್ನು ವೀಕ್ಷಿಸಿ ಆಟಗಾರರಿಗೆ ಪ್ರೋತ್ಸಾಹ ನೀಡಿದರು. ಪ್ರಥಮ ಬಹುಮಾನವಾದ ರೂ. 3555 ಮತ್ತು ಟ್ರೋಫಿಯನ್ನು ಸಿಂಧನೂರು ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಅವರು ದೇಣಿಗೆಯಾಗಿ ನೀಡಿದ್ದು, ದ್ವಿತೀಯ ಬಹುಮಾನ ರೂ. 25555 ಅನ್ನು ಶ್ರೀ ಟಿ. ಮಲ್ಲಿಕಾರ್ಜುನ ಬಾರ್ಕೆರ್ (ಸಿಂಗಾಪುರ) ಹಾಗೂ ಶ್ರೀ ಮಲ್ಲೇಶಪ್ಪ ಸಾಹುಕಾರ್ (ಮುಕುಂದ) ಅವರು ವಹಿಸಿಕೊಂಡರು.

ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸಣ್ಣ ಯಶೋಧ (ಗಂ. ರಮೇಶ್) ಮಾತನಾಡಿ, ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಗ್ರಾಮೀಣ ಕ್ರೀಡೆಗಳ ಉತ್ತೇಜನಕ್ಕೆ ದೊಡ್ಡ ವೇದಿಕೆಯಾಗಿದೆ ಎಂದು ಪ್ರಶಂಶಿಸಿದರು. ಗ್ರಾಮಸ್ಥರ ಸಕ್ರಿಯ ಪಾಲ್ಗೊಳ್ಳಿಕೆ, ಕ್ರೀಡಾಭಿಮಾನಿಗಳ ಬೆಂಬಲ ಮತ್ತು ಆಯೋಜಕರ ಶ್ರಮದಿಂದ ಕಬಡ್ಡಿ ಬಂದಾವಳಿ ಯಶಸ್ವಿಯಾಗಿ ನೆರವೇರಿದ್ದು, ಗ್ರಾಮೀಣ ಕ್ರೀಡೆಗಳನ್ನು ಅಭಿವೃದ್ಧಿಪಡಿಸಲು ಇಂತಹ ಕಾರ್ಯಕ್ರಮಗಳು ಮುಂದುವರಿಯಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *