ದೇವದುರ್ಗ : ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಇಂದಿನ ಮಕ್ಕಳ ಪಾತ್ರವು ಬಹಳ ಮಹತ್ತರವಾದದ್ದು, ಆದ್ದರಿಂದ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಮಹತ್ವವನ್ನು ಸಾರುವ ಸಲುವಾಗಿ ನವೆಂಬರ್ 14 ರಂದು ದೇಶಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.ಇನ್ನೂ ಮಕ್ಕಳು ಮೋಬೈಲ್ ಹಿರಿಯುವುದನ್ನು ಬಿಟ್ಟು ಓದುವ ಕಡೆ ಹವ್ಯಾಸ ಬೆಳಸಿಕೊಳ್ಳಿ ಎಂದು ಶಾರದಾ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ರು ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಹೇಳಿದರು
ಅವರು ಸೋಮವಾರ ದಂದು ಬಸವ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ದೇವದುರ್ಗದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಆಧುನಿಕ ಯುಗದಲ್ಲಿ ಮೊಬೈಲ್ ಗಿಳು ಬಹಳ ಆಗಿದೆ, ಪುಸ್ತಕ ಅಭ್ಯಾಸ ಕಡಿಮೆ ಆಗುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು, ಶಾಲೆಯಲ್ಲಿ ಆಂಗ್ಲ ಭಾಷೆ ಕಲಿಯಿರಿ ಮನೆ ಮತ್ತು ಸಮಾಜದಲ್ಲಿ ಮಾತೃ ಭಾಷೆ ಕನ್ನಡವನ್ನು ಮಾತನಾಡಿ ಎಂದು ಹೇಳಿದರು.
ನಂತರ ಯುವ ಕವಿ, ಲೇಖಕ ಮಲ್ಲಿಕಾರ್ಜುನ ನಾಯಕ ಕಾರ್ಯಕ್ರಮ ಕುರಿತು ಮಾತನಾಡಿ ಬಸವ ಶಿಕ್ಷಣ ಸಂಸ್ಥೆ ವಿದ್ಯಾಕಾಶಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲಾ, ಸಮಾಜಕ್ಕೆ ವಿದ್ಯಾವಂತ ಪ್ರಜೆಗಳನ್ನ ನೀಡುತ್ತಿರುವುದು ಶ್ಲಾಘನಿಯ, ಸಾಲುಮರದ ತಿಮ್ಮಕ್ಕರನ್ನ ನೆನೆದು ಬಸವ ಶಿಕ್ಷಣ ಸಂಸ್ಥೆಯು ಸಸಿ ನೆಟ್ಟು ಸಂಕೇತಿಕವಾಗಿ ಮೌನಾಚಾರಣೆ ಮಾಡಿ ವೃಕ್ಷಮಾತೇ ನೆನೆಯುತ್ತಿರುವು ಬಹಳ ಅವಿಸ್ಮರಣೀಯ ಎಂದು ಹೇಳಿದರು,
ಈ ಸಂದರ್ಭದಲ್ಲಿ ಬಸವ ಶಿಕ್ಷಣ ಸಂಸ್ಥೆಯ ಗೌರವ ಸಲಹೆಗಾರರಾದ ತಿರುಪತಿ ಸೂಗೂರು, ಶ್ಯಾಮ್ ಸುಂದರ್, ಹನುಮಂತ್ರಾಯ, ವೇಣು, ಪ್ರಭುರಾಯ, ಎ.ಎಸ್.ಕೆ.ಸ್ವಾಮಿ, ಗುರುನಾಥ, ನೀರಂಜನ್’ ಮಸರಕಲ್, ಮನುನಾಥ, ಅಮೃತ, ಫಯಾಜ್, ಸಂಸ್ಥೆಯ ಶಿಕ್ಷಕ ವೃಂದ, ಉಪನ್ಯಾಸಕರು, ರವಿ ರಾಯಚೂರ್ಕರ್ ಅವರು ವೇದಿಕೆ ನಿರೂಪಣೆ ಮಾಡಿದರು, ಈ ವೇಳೆ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳು ಮತ್ತು ಪೋಷಕರು ಇದ್ದರು.

