ಸಿಂಧನೂರು : ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯ ಪರಿಪಾಲನೆ, ಬಹಳ ಮುಖ್ಯ, ಜೊತೆಗೆ ಶ್ರದ್ಧೆಯಿಂದ ಓದಿದಾಗ ಮಾತ್ರ ಏನಾದರೊಂದು ಸಾಧಿಸಬಹುದು. ನೀವು ಅಭ್ಯಾಸ ಮಾಡುತ್ತಿರುವ ನರ್ಸಿಂಗ್, ಪ್ಯಾರಾಮೆಡಿಕಲ್, ಜಿಎನ್ಎಮ್, ಹೀಗೆ ಅನೇಕ ಕೋರ್ಸ್ ಗಳನ್ನು ಕಲಿತು ಅನೇಕ ಉದ್ಯೋಗ ಸೃಷ್ಟಿಸಿಕೊಳ್ಳಬಹುದು. ಈಗಾಗಲೇ ಈ ಸನ್ ರೈಸ್ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಸುಮಾರು 350 ರಿಂದ 400 ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ, ಮೆಡಿಕಲ್ ಶಾಪ್ ಗಳಲ್ಲಿ ಉದ್ಯೋಗದಲ್ಲಿ ತೊಡಗಿದ್ದಾರೆ ಎಂದು ಸಿಂಧನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾದ ಶರಣಪ್ಪ ಗೋನಾಳ ಹೇಳಿದರು.
ನಗರದ ಸನ್ ರೈಸ್ ನರ್ಸಿಂಗ್ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕಕ್ಕೆ ಆಯ್ಕೆಯಾದ ಪದಾಧಿಕಾರಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಈಗ ಪ್ರತಿಯೊಬ್ಬರಿಗೆ ಅವಶ್ಯಕ ಆದರೆ ಅನವಶ್ಯಕ ಬಳಸದೆ ಉಪಯೋಗಕ್ಕೆ ಬಳಸಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಜಿಲ್ಲಾ ಉಪಾಧ್ಯಕ್ಷ ಅಶೋಕ ಬೆನ್ನೂರು ಮಾತನಾಡಿ, ಈ ಸನ್ ರೈಸ್ ಕಾಲೇಜಿನ ವಿಶೇಷ ಎಂದರೆ, ಎಲ್ಲಾ ಮಹನೀಯರ ದಿನಾಚರಣೆ, ಹಾಗೂ ಸಾಧಕರಿಗೆ ಗೌರವಿಸುವುದು ಪ್ರಾರಂಭದಿಂದಲೂ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಸನ್ ರೈಸ್ ಶಿಕ್ಷಣ ಸಂಸ್ಥೆ ಜಿಲ್ಲೆಯಾದ್ಯಂತ ಉತ್ತಮ ಹೆಸರು ಮಾಡಿದೆ. ಇದಕ್ಕೆ ಕಾರಣಿಕರ್ತರಾದ ಅಧ್ಯಕ್ಷ ಇರ್ಫಾನ್ ಕೆ, ಅತ್ತಾರ್ ಅವರ ಪರಿಶ್ರಮವೇ ಕಾರಣ ಎಂದರು.
ತದನಂತರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿಯಾದ ಚಂದ್ರಶೇಖರ ಬೆನ್ನೂರು ಮಾತನಾಡಿ, ಬೆಳೆಯುವ ಸಿರಿ ಮೊಳಕೆಯಲ್ಲಿ ಅನ್ನುವ ಹಾಗೆ ವಿದ್ಯಾರ್ಥಿಗಳ ಜೀವನ ಉತ್ತಮವಾದದು. ಈ ಸಮಯವನ್ನು ವ್ಯರ್ಥಮಾಡದೆ ತುಂಬಾ ಶಿಸ್ತಿನಿಂದ ಓದಿ ಬದುಕನ್ನು ಕಟ್ಟಿಕೊಳ್ಳಬೇಕು. ಈ ಕಾಲೇಜಿಗೆ ಉತ್ತಮ ಹೆಸರಿದೆ. ಇಲ್ಲಿಂದ ಕಲಿತವರು ಉದ್ಯೋಗ ಹಿಡಿದು ಜೀವನ ರೂಪಿಸಿಕೊಂಡಿದ್ದಾರೆ. ಇವರು ನಡೆಸುವ ಪ್ರತಿಯೊಂದು ಕಾರ್ಯಕ್ರಮಗಳು ಬಹಳ ಅರ್ಥಪೂರ್ಣವಾಗುವಂತಹ ಕಾರ್ಯಕ್ರಮಗಳೆ ಇದರಿಂದ ವಿದ್ಯಾರ್ಥಿಗಳಿಗೂ ಅನುಕೂಲ ಎಂದರು.
ಸನ್ ರೈಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಇರ್ಫಾನ್ ಕೆ ಅತ್ತಾರ್ ಮಾತನಾಡಿ, ಸಮಾಜದ ಅಂಕುಡೊಂಕು ತಿದ್ದಿ ಸರಿದಾರಿಯಲ್ಲಿ ನಡೆಯುವಂತೆ ಮಾಡುತ್ತಿರುವುದು ಮಾಧ್ಯಮದ ಪತ್ರಕರ್ತರು. ಅವರು ಯಾವುದೇ ಫಲಪೇಕ್ಷೆ ಬಯಸದೆ, ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದಾರೆ, ಜೊತೆಗೆ ಇದೊಂದು ಸಮಾಜ ಸೇವೆ ಎಂದು ಭಾವಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಪದಾಧಿಕಾರಿಗಳಾಗಿ ಆಯ್ಕೆಗೊಂಡು ಸನ್ಮಾನಕ್ಕೆ ಅರ್ಹರಾಗಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿ ಇರುವ ಅವರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.
ಸನ್ ರೈಸ್ ನರ್ಸಿಂಗ್ ಕಾಲೇಜು ಪ್ರಿನ್ಸಿಪಾಲ್ ಲಾಜರ್ ಸಿರಿಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಇದೇ ವೇಳೆ ಜಿಲ್ಲಾ ಉಪಾಧ್ಯಕ್ಷ ಅಶೋಕ ಬೆನ್ನೂರು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಚಂದ್ರಶೇಖರ್ ಯರದಿಹಾಳ, ತಾಲೂಕು ಅಧ್ಯಕ್ಷರಾದ ಶರಣಪ್ಪ ಗೋನಾಳ, ಪ್ರಧಾನ ಕಾರ್ಯದರ್ಶಿ ಅಮರೇಶ ಅಲಬನೂರು, ಉಪಾಧ್ಯಕ್ಷರಾದ ಯಮನಪ್ಪ ಪವಾರ್, ದುರುಗೇಶ, ಖಜಾಂಚಿ ಚಂದ್ರಶೇಖರ ಬೆನ್ನೂರು, ಕಾರ್ಯಕಾರಿ ಮಂಡಳಿ ಸದಸ್ಯರಾದ ವೀರೇಶ ಗಡ್ಡಿಮಾಳ, ಚನ್ನಬಸವ ಕಟ್ಟಿಮನಿ, ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ: ಕಾರ್ಯದರ್ಶಿ ಇರ್ಷಾಧ್ ಕೆ, ಅತ್ತಾರ್, ಪ್ಯಾರಾಮೆಡಿಕಲ್ ಪ್ರಿನ್ಸಿಪಾಲ್ ಚಕ್ರವರ್ತಿ, ಫಾರ್ಮಸಿ ಪ್ರಿನ್ಸಿಪಾಲ್ ವಸೀಂ ಹುಸೇನ್, ಉಪನ್ಯಾಸಕರಾದ ಆಶುಪಾಷಾ, ರಾಜೇಶ, ಚೈತ್ರಾ, ಮನೋಹರ್, ಆಶೀಫ್, ಸೇರಿದಂತೆ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


