ಮಾನ್ವಿ : ಪಟ್ಟಣದ ಕಲ್ಮಠ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಾಚನ ನೀಡಿ ರೈತರು ದೇಶದ ಆಹಾರ ಭದ್ರತೆಗೆ ಕಾರಣರಾಗಿದ್ದರು ಕೂಡ ನಮ್ಮ ರೈತರ ಬದುಕು ಆನಂದದಾಯಕವಾಗುವುದಕ್ಕೆ, ರೈತರ ಭದ್ರತೆಗೆ, ರೈತರ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ಯೋಜನೆ ರೂಪಿಸುವುದು ಅಗತ್ಯವಿದೆ ಪ್ರತಿ ತುತ್ತಿನ ಹಿಂದೆ ಸಾವಿರಾರು ಜನ ರೈತರ ಶ್ರಮವಿದೆ ಎನ್ನುವುದನ್ನು ನಾವು ಯಾವತ್ತು ಮರೆಯಬಾರದು. ರೈತರ ಪಂಪಸೆಟ್ ಗಳಿಗೆ ಸರ್ಕಾರದಿಂದ ಸಮರ್ಪಕವಾಗಿ ವಿದ್ಯುತ್ ಒದಗಿಸಬೇಕು. ನಾವು ಉಳಿಯಬೇಕಾದರೆ ನಮಗೆ ಅಗತ್ಯವಾಗಿ ಮಳೆ,ನೆರಳು,ಉಸಿರಿಗೆ ಅಗತ್ಯವಿರುವ ಅಮ್ಲಜನಕ ದೋರೆಯಬೇಕಾದಲ್ಲಿ ಹೆಚ್ಚು ಹೆಚ್ಚು ಮರಗಳನ್ನು ನೆಟ್ಟು ಬೆಳೆಸಬೇಕಾಗಿದೆ. ಮರವಿದ್ದರೆ ಮಳೆ, ಮಳೆಯಿದ್ದರೆ ಬೆಳೆ ಬೆಳೆಯಿದ್ದರೆ ಬದುಕು ಎಂದು ತಿಳಿಸಿದರು.
ಉಪನ್ಯಾಸಕಿ ಗೌರಮ್ಮ ಇವರು ರಾಷ್ಟ್ರೀಯ ರೈತರ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ತಾಲೂಕಿನ ಪ್ರಗತಿಪರ ರೈತರಿಗೆ ಕಲ್ಮಠ ಶ್ರೀ ಕೃಷಿರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ರೈತರ ಪಾದಪೂಜೆ ನಡೆಯಿತು. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳಿಂದ ಗ್ರಾಮೀಣ ಸೋಗಡಿನ ಜೀವನವನ್ನು ಪರಿಚಯಿಸುವ ಕಾಳು,ಧಾನ್ಯಗಳನ್ನು ಕುಟ್ಟುವುದು, ಬೀಸುವುದು,ರೋಟ್ಟಿ ಮಾಡುವುದು, ,ಭತ್ತರಾಶಿ ಮಾಡುವದು ಸೇರಿದಂತೆ ವಿವಿಧ ರೂಪಕಗಳು ಗಮನ ಸೇಳೆದವು.
ಕಾರ್ಯಕ್ರಮದಲ್ಲಿ ಮುಖ್ಯಗುರು ಮಂಜುನಾಥ ಕಮತರ್, ತಾಲೂಕಾ ವಕೀಲರ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಪ್ರಭಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು ಆಡಳಿತಾಧಿಕಾರಿ ಸಂಗಯ್ಯ ಸ್ವಾಮಿ. ಆರ್, ವೆಂಕಯ್ಯ ಶೆಟ್ಟಿ , ಶಂಕರಾನದ , ಕೃಪಾಸಾಗರ ಪಾಟೀಲ್, ಕಲ್ಮಠ ಪಿಯು ಕಾಲೇಜಿನ ಪ್ರಾಚಾರ್ಯರಾದ ಎಸ್.ಎಸ್. ಪಾಟೀಲ್. ಕಲ್ಮಠ ಪದವಿ ಕಾಲೇಜಿನ ಪ್ರಾಚಾರ್ಯರಾದ ಸಿದ್ದನಗೌಡ ಪಾಟೀಲ್. ಶಿಕ್ಷಕರಾದ ಎಂ. ಎಂ. ಹಿರೇಮಠ, ಪ್ರಭಾವತಿ ಸೇರಿದಂತೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.
ಮಾನ್ವಿ: ಪಟ್ಟಣದ ಕಲ್ಮಠ ಶಾಲೆಯಲ್ಲಿ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮವನ್ನು ಕಲ್ಮಠದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು.

Leave a Reply

Your email address will not be published. Required fields are marked *