ಲಿಂಗಸಗೂರು : ಡಿ 24 , ಪಟ್ಟಣದ ಅಯ್ಯಪ್ಪಸ್ವಾಮಿ ದೇವಸ್ಥಾನದ 9 ನೇ ವಾರ್ಷಿಕೋತ್ಸವ ಹಾಗೂ ಮಂಡಲ ಪೂಜೆ ನಿಮತ್ಯ ಮಾಲಾಧಾರಿಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿ ಮತ್ತು ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಿದರು.
ಸುಪ್ರಭಾತದೊಂದಿಗೆ ಆರಂಭಗೊಂಡ ಪೂಜಾ ಕೈಂಕರ್ಯಗಳು ನೈರ್ಮಲ್ಯ ದರ್ಶನಂ, ಮಹಾಗಣಪತಿ ಹೋಮ,ಅಯ್ಯಪ್ಪಸ್ವಾಮಿ ಮೂರ್ತಿ ಸೇರಿದಂತೆ ದೇವಸ್ಥಾನದ ಉಪ ದೇವತೆಗಳ ಕಳಸಾಭಿಷೇಕಂ ನೆರವೇರಿಸಿದ ನಂತರದಲ್ಲಿ ಈಶ್ವರ ದೇವಸ್ಥಾನದಲ್ಲಿ ತೆರೆದ ಅಲಂಕೃತ ವಾಹನದಲ್ಲಿ ಭಾವಚಿತ್ರ ಪ್ರತಿಷ್ಠಾಪಿಸಿ, ಉತ್ಸವ ಕರ್ಪೂರದಾರತಿ ಬೆಳಗುತ್ತ ಮೆರವಣಿಗೆಗೆ ಮೂರ್ತಿಯೊಂದಿಗೆ ಚಾಲನೆ ನೀಡಲಾಯಿತು. ಈಶ್ವರ
ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಹಳೆಬಸ್ ನಿಲ್ದಾಣ, ಹಳೆ ವಿಜಯ ಬ್ಯಾಂಕ್ ರಸ್ತೆ, ಗಡಿಯಾರ ವೃತ್ತ, ಅಂಚೆ ಕಚೇರಿ, ಬಸ್ ನಿಲ್ದಾಣ ಮಾರ್ಗವಾಗಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಸಾಗಿ ಬಂದಿತು.ನಂತರದಲ್ಲಿ ಅನ್ನಸಂತರ್ಪಣೆ ನೆರವೇರಿತು.ಸಂಜೆ ದೀಪಾರಾಧನೆ, ಅಯ್ಯಪ್ಪಸ್ವಾಮಿ 18 ಮೇಟ್ಟಿಲು ಪಡಿ ಪೂಜೆ, ಪುಷ್ಪಾಭಿಷೇಕ,ಪಾನಕ ನೈವೇದ್ಯ ಅರ್ಪಿಸಿ ಹರಿವರಾಸನಂ ಮೂಲಕ ಪೂಜೆಗಳಿಗೆ ವಿದಾಯ ಹೇಳಲಾಯಿತು.ಕೇರಳ ಮೂಲದ ಪ್ರಶಾಂತ್ ನಂಬೊದರಿ,ನೇತೃತ್ವದಲ್ಲಿ ಸಿದ್ರಾಮು ಗುರುಸ್ವಾಮಿ ನಗರಗುಂಡ ಅವರ ಸಹಕಾರದಲ್ಲಿ ಪೂಜಾ ಕಾರ್ಯಗಳು ನಡೆದವು. ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮಿತಿ ಟ್ರಸ್ಟ ಅಧ್ಯಕ್ಷ ಮನೋಹರ ರೆಡ್ಡಿ ಮುನ್ನೂರು,ಕಾರ್ಯದರ್ಶಿ ಈರಣ್ಣ ಗುರುಸ್ವಾಮಿ, ಖಜಾಂಚಿ ಬಾಲನ್, ಮಾರೆಪ್ಪ ನಾಯಕ, ರಾಜೇಶ ಮಾಣಿಕ್ ಸೇರಿದಂತೆ ಎಲ್ಲಾ ಭಕ್ತದಿಗಳು ಭಾಗವಹಿಸಿದ್ದರು.

