ಮಾನ್ವಿ: ಪಟ್ಟಣದ ನೇರಳು ಹಿರಿಯ ನಾಗರಿಕರ ಮನೆಯಲ್ಲಿ ಹಿರಿಯ ಪತ್ರಕರ್ತರಾದ ರಾಮಂಜನೇಯ್ಯ ಹಾಗೂ ಸುಧ ದಂಪತಿಗಳು ಭಾರತ ಸೇನೆಯಲ್ಲಿ ವೈದ್ಯರಾಗಿ ದೇಶದ ಜಮ್ಮುವಿನಲ್ಲಿ ಸೇವೆಸಲ್ಲಿಸುತ್ತಿರುವ ತಮ್ಮ ಪುತ್ರ ಡಾ.ಸಿ.ಅನಿರುದ್ದ ರವರ ಹುಟ್ಟು ಹಬ್ಬವನ್ನು ಹಿರಿಯ ನಾಗರಿಕರೊಂದಿಗೆ ವಿಶೇಷವಾಗಿ ಆಚರಿಸಿದರು.
ನೆರಳು ಹಿರಿಯ ನಾಗರಿಕರ ಮನೆಯಲ್ಲಿನ ಹಿರಿಯ ನಾಗರಿಕರಿಗೆ ಸಿಹಿ ಊಟವನ್ನು ನೀಡುವ ಮೂಲಕ ಆಚರಿಸಿದರು.
ಕ.ಸಾ.ಪ. ಜಿಲ್ಲಾ ಗೌ.ಕಾರ್ಯದರ್ಶಿ ತಾಯಪ್ಪ ಬಿ.ಹೋಸೂರು,ಸೇರಿದಂತೆ ಪತ್ರಿಕಾ ಛಾಯ ಗ್ರಾಹಕರಾದ ಶಿವಕುಮಾರ ಹಾಗೂ ನೇರಳು ಹಿರಿಯ ನಾಗರಿಕರ ಮನೆಯ ವ್ಯವಸ್ಥಾಪಕರು ಇದ್ದರು.

