ಮಾನ್ವಿ: ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕಿನ ಜಾನೆಕಲ್ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಹಾಗೂ ವಿವಿಧ ದಲಿತಪರ ಸಂಘಟನೆಗಳಿAದ ನಡೆದ ಪ್ರತಿಭಟನೆ ಧರಣಿಯಲ್ಲಿ ಗವಿಗಟ್ಟ ಗ್ರಾ,ಪಂ.ಸದಸ್ಯ ದೇವೆಂದ್ರಪ್ಪ ಮಾತನಾಡಿ ಜಾನೆಕಲ್ ಗ್ರಾಮಪಂಚಾಯಿತಿಯಲ್ಲಿ 15 ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಕೈಗೊಳ್ಳಲಾದ ಕಾಮಗಾರಿಗಳ ಪರಿಶೀಲನೆ ನಡೆಸಬೇಕು,ಗ್ರಾ.ಪಂ. ವತಿಯಿಂದ ಸಂಗ್ರಹಿಸಲಾದ ತೆರಿಗೆ ಹಣದ ಮಾಹಿತಿ ನೀಡಬೇಕು,ಬಸವ ವಸತಿ,ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ ಮಂಜೂರಾದ ಮನೆಗಳನ್ನು ಗ್ರಾಮ ಸಭೆ ಮೂಲಕ ಹಂಚಿಕೆ ಮಾಡಬೇಕು, ಈ ಸ್ವತ್ತು ಯೋಜನೆಯಡಿಯಲ್ಲಿ ಆಸ್ತಿ ಮಾಲಿಕರಿಗೆ ಖಾತಾ ಉತಾರ ಪ್ರಮಾಣ ಪತ್ರಗಳನ್ನು ನೀಡುವಲ್ಲಿ ವಿನಾಕರಣ ವಿಳಂಬ ಮಾಡುವ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ,ಗವಿಗಟ್ಟ ಗ್ರಾಮದಲ್ಲಿ ಶಕ್ತಿ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು,ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು, ಗ್ರಾಮದ ಶಾಲೆಯಲ್ಲಿ ಕೈಗೊಳ್ಳಲಾದ ಮಳ್ಳೆನೀರು ಕೋಯ್ಲು ಕಾಮಗಾರಿ, ಮರಂ ರಸ್ತೆ ಕಾಮಗಾರಿಯ ಬಾಕಿ ಇರುವ ಬಿಲ್ ಪಾವತಿ ಮಾಡಬೇಕು,ನರೇಗಾ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಕೂಲಿ ಕೆಲಸವನ್ನು ನೀಡದೆ ಇರುವ ಗ್ರಾ.ಪಂ. ಅಭಿವೃದ್ದಿ ಅಧಿಕಾರಿಯ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಜೆ.ರಮೇಶ ನಾಯಕ ಗವಿಗಟ್ಟ , ದಲಿತ ಸೇನೆ ತಾ.ಅಧ್ಯಕ್ಷರಾದ ರಮೇಶ ಕರೆಗುಡ್ಡ,ಗೌ.ಅಧ್ಯಕ್ಷರಾದ ಕರಿಯಪ್ಪ ನಕ್ಕುಂದಿ, ಭೀಮರಾಯ, ಮುತ್ತಣ್ಣ, ಹುಸೇನಪ್ಪ,ಮಾರೇಶ, ಬಿ.ಅಮರೇಶನಾಯಕ,ಮಾರೇಶ ಬಂಡಾರಿ, ಬಡಕಪ್ಪ,ನಾಗರಾಜ,ಶಾಂತ ಕುಮಾರ, ಚನ್ನಪ್ಪ ಗೌಡ, ಮೌನೇಶ, ಮರಿಸ್ವಾಮಿ,ಸುಧಾಕರ ಅರೋಲಿ, ಸೇರಿದಂತೆ ಇನ್ನಿತರರು ಇದ್ದರು.

