ಸಿಂಧನೂರು : ಸಂಸ್ಕೃತಿ ಉಳಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು, ಇದರ ಜೊತೆಗೆ ಮೌಲ್ಯಯುತ ಶಿಕ್ಷಣ ಅವಶ್ಯಕತೆಯಿದೆ ಎಂದು ಜಿಲ್ಲಾ ಪತ್ರಕರ್ತ ಸಂಘದ ಕಾರ್ಯಕಾರಿ ಸದಸ್ಯ ಚಂದ್ರಶೇಖರ ಯರದಿಹಾಳ ಹೇಳಿದರು.
ನಗರದ ವಾರ್ಡ್ ನಂಬರ್ 13ರಲ್ಲಿ ಇರುವ ವಿಜಯ ಪಬ್ಲಿಕ್ ಶಾಲೆಯಲ್ಲಿ ರೈತರ ದಿನಾಚರಣೆಯ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಹಳ್ಳಿ ಹಬ್ಬ ಕೃಷಿ ಸಂಭ್ರಮ ವಿಶಿಷ್ಟ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿ, ಗುಣ ಮಟ್ಟದ ಶಿಕ್ಷಣ ಇಂದಿನ ದಿನಮಾನದಲ್ಲಿ ಅವಶ್ಯಕತೆ ಇದೆ. ಆಗ ಮಾತ್ರ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತದೆ.

ಇಂದಿಗೂ ಸಂಸ್ಕೃತಿ ತಿಳಿಯಬೇಕಾದರೆ ಹಳ್ಳಿಗಳಲ್ಲಿ ನೋಡುವಂತದ್ದು ಹಾಗಿದೆ, ಪ್ರತಿಯೊಂದು ಹಬ್ಬ ಸಡಗರ ಸಂಭ್ರಮದಿಂದ ಆಚರಿಸುವ ಕೆಲಸ ಹಳ್ಳಿಗಳಲ್ಲಿ ಆಗುತ್ತದೆ. ಅದೇ ತರ ನಗರದಲ್ಲಿ ಇನ್ನು ಹೆಚ್ಚು ಹೆಚ್ಚು ಸಂಭ್ರಮ ಹಬ್ಬಗಳು ಆದರೆ ಮತ್ತಷ್ಟು ಸಂಸ್ಕೃತಿ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.

ನಿವೃತ್ತಿ ಶಿಕ್ಷಕ ವೆಂಕನಗೌಡ ವಟಗಲ್ ಮಾತನಾಡಿ, ಹಿಂದಿನ ಕಾಲದ ಪದ್ಧತಿಗಳು ಈಗ ಕ್ಷೀಣಿಸುವ ಹಂತಕ್ಕೆ ತಲುಪಿದೆ. ಆಗ ಹಳ್ಳಿಯಲ್ಲಿ ವೈಶಿಷ್ಟ್ಯತೆಯ ವೇಷ ಭೂಷಣಗಳು ಮತ್ತು ಅಕ್ಕ ಪಕ್ಕದವರು ಸಡಗರ ಸಂಭ್ರಮದಿಂದ ಯಾವುದೇ ಕಾರ್ಯಕ್ರಮವಿರಲಿ ಆಚರಿಸುವ ಕೆಲಸವಾಗುತ್ತಿತ್ತು. ಹಳ್ಳಿಗಳಲ್ಲಿ ಇನ್ನೂ ಹಳೆಯ ಆಚರಣೆಗಳು ಈಗಲೂ ಇದ್ದಾವೆ, ಅವೆಲ್ಲವನ್ನೂ ನೆನಪಿಸುವ ಕೆಲಸ ಈಗಿನ ಕಾಲದ ವಿದ್ಯಾರ್ಥಿಗಳಿಗೆ ಮಾಡುವುದು ಅವಶ್ಯಕತೆಯಿದೆ.

ಗುಣಮಟ್ಟದ ಶಿಕ್ಷಣವು ಅವಶ್ಯಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಅವಶ್ಯಕತೆ ಇದೆ, ಇಂದಿನ ದಿನಮಾನದಲ್ಲಿ ಹಣಕ್ಕಾಗಿ ಶಿಕ್ಷಣ ಸಂಸ್ಥೆಗಳು ಆಗಬಾರದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವ ಗುಣ ಇಟ್ಟುಕೊಂಡು ಶಿಕ್ಷಣ ಸಂಸ್ಥೆಗಳು ಆರಂಭವಾದರೆ, ಅಂತ ಶಿಕ್ಷಣ ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತದೆ,

ವಿಜಯ ಪಬ್ಲಿಕ್ ಶಾಲೆಯನ್ನು ಸಮಾನ ಮನಸ್ಕರ ಗೆಳೆಯರು ಕಟ್ಟಿರುವುದು ಒಂದು ಸಂತೋಷಕರ ವಿಷಯವಾಗಿದೆ. ಇತ್ತೀಚಿಗೆ ವಿದ್ಯಾರ್ಥಿಗಳು ಫಲಿತಾಂಶ ಜೊತೆಗೆ ಕ್ರೀಡೆಗಳಲ್ಲೂ ಸಹ ಉತ್ತಮ ಸಾಧನೆ ಮಾಡುತ್ತಿರುವುದು ಒಂದು ಶ್ಲಾಘನೀಯ ಕೆಲಸ ಎಂದರು.

ಆದಿತ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುರೇಶರೆಡ್ಡಿ ಮಾತನಾಡಿ, ವಿಜಯ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿಯವರಲ್ಲಿ ತಂದೆ, ತಾಯಿಯ ಗುಣ ಇದೆ, ಅನೇಕ ಮಕ್ಕಳನ್ನು ತಂದೆ ತಾಯಿತರ ಮಕ್ಕಳನ್ನು ಪ್ರೀತಿ ಮಾಡುವ ಗುಣ ಈ ಶಾಲೆಯಲ್ಲಿ ಕಾಣುತ್ತಿದೆ, ಮೌಲ್ಯಗಳನ್ನು ಬೆಳೆಸುವ ಗುಣ ಪ್ರತಿಯೊಬ್ಬರಲ್ಲಿ ಬರಬೇಕು ಆಗ ಮಾತ್ರ ಇಂತಹ ಸಂಸ್ಥೆಗಳಿಗೆ ಹೆಸರು ಬರಲು ಸಾಧ್ಯ ಎಂದರು.

ನಿವೃತ್ತಿ ಶಿಕ್ಷಕರ ಬೀರಪ್ಪ ಶಂಭೂಜಿ ಮಾತನಾಡಿ, ರೈತರ ದಿನಾಚರಣೆಯ ಪ್ರಯುಕ್ತ ಹಳ್ಳಿಯ ಸಂಸ್ಕೃತಿ ಉಳಿಸುವ ಕೆಲಸ ಶಾಲೆಯಲ್ಲಿ ಆಗಿದೆ, ಶಾಲೆ ಆವರಣದಲ್ಲಿ ತರಕಾರಿ ಮಾಡುವುದು, ಭಾವಿಕಟ್ಟೆ, ಇನ್ನಿತರ ಅನೇಕ ವೈಶಿಷ್ಟತೆಯ ಪ್ರದರ್ಶನಗಳು ಏರ್ಪಡಿಸುವುದು ಒಂದು ಸಂಸ್ಕೃತಿಗೆ ಈ ಶಾಲೆ ಮುಖ್ಯವಾಗಿದೆ ಎಂದರು.

ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆ:

ಮುಖ್ಯ ರಸ್ತೆಗಳಲ್ಲಿ ಎತ್ತಿನ ಬಂಡಿಯ ಮೂಲಕ ಶಾಲಾ ವಿದ್ಯಾರ್ಥಿಗಳನ್ನು ಕೂಡಿಸಿಕೊಂಡು ಮೆರವಣಿಗೆ ನಡೆಸಿದರು. ಇದೇ ವೇಳೆ ಡೊಳ್ಳು ಕುಣಿತ ಶಾಲೆಯ ವಿದ್ಯಾರ್ಥಿಗಳು ಅನೇಕ ರೀತಿಯಲ್ಲಿ ವೇಷ ಧಾರೆ ಧರಿಸಿರುವುದು ನೋಡುಗರ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ: ಸಂಸ್ಥೆಯ ಮುಖ್ಯಸ್ಥರು ಹಾಗೂ ಮುಖ್ಯಗುರುಗಳಾದ ಹನುಮೇಶ ಗುಡುದೂರು, ಉಪನ್ಯಾಸಕ ಚಾಂದ್ ಪಾಷಾ, ನಿರುಪಾದಿ ಅರಳಹಳ್ಳಿ, ಶಿಕ್ಷಕಿಯರಾದ ಶಾರದಾ, ನಾಜಿಯ್, ಅನುಪ್ರಿಯಾ, ಶಾಹಿನಿ, ಸೇರಿದಂತೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *