ಕವಿತಾಳ : ಡಿ.22
ಪಟ್ಟಣ ಪಂಚಾಯತಿಯ  ನೂತನ ಅಧ್ಯಕ್ಷೆಯಾಗಿ 14 ವಾರ್ಡನ್  ಶ್ರಿಮತಿ ರಾಜೇಶ್ವರಿ ತಿಪ್ಪಯ್ಯಸ್ವಾಮಿ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿಯಾಗಿ ಆಗಮಿಸಿದ ಸಿರವಾರ ತಹಶಿಲ್ದಾರ ಅಶೋಕ ಪವಾರ್  ಹೇಳಿದರು .
ಕಾರಣಾಂತರಗಳಿಂದ ಖಾಸೀಂ ಬಿ ಚಾಂದಪಾಷಾ ಇವರು ರಾಜಿನಾಮೆ ಸಿಲ್ಲಿಸಿದ ಕಾರಣಕ್ಕೆ ಹೊಸ ಅದ್ಯಕ್ಷ ರ ಆಯ್ಕೆ ಪ್ರಕ್ರಿಯೆ ನಡೆಯಿತು .
ಒಟ್ಟು 16 ಜನ ಸದಸ್ಯ ಪೈಕಿ  ರಾಜೇಶ್ವರಿ ತಿಪ್ಪಯ್ಯ ಸ್ವಾಮಿ ಒಬ್ಬರೆ  ನಾಮ ಪತ್ರ ಸಲ್ಲಿಸಿದ್ದು 16 ಜನ ಸಂಖ್ಯಾ ಬಲದ ಸದಸ್ಯರ ಪೈಕಿ 11 ಜನ ಉಪಸ್ಥಿತರಿದ್ದು ಶಾಸಕರು ಒಂದು ಮತ ಚಲಾಯಿಸಿರುವರು , ನಿಗದಿತ ಸಮಯದ ಒಳಗೆ  ಇತರೆ ಯಾವುದೇ ನಾಮ ಪತ್ರ ಸಲ್ಲಿಕೆಯಾಗಿರುವುದಿಲ್ಲ , ಮತ್ತು ಯಾವುದೇ ನಾಮಪತ್ರ ಹಿಂಪಡೆದಿರುದಿಲ್ಲ  , ಆಯ್ಕೆಗೆ ಬೇಕಾದ  ಕೋರಂ ಸಂಖ್ಯಾಬಲ ಇದ್ದ ಕಾರಣ ರಾಜೇಶ್ವರಿ ತಿಪ್ಪಯ್ಯಸ್ವಾಮಿಯವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದೆ  ಎಂದು ಸಿರವಾರ ತಹಶಿಲ್ದಾರ ಅಶೋಕ ಪವಾರ್ ಘೋಷಣೆ ಮಾಡಿದರು .
ಕಾಂಗ್ರೆಸ್ ಕಾರ್ಯಕರ್ತರು ಬೆಂಬಲಿಗರು ಪಟಾಕಿ ಹಚ್ಚಿ ಗುಲಾಲು ಎರಚಿಕೊಂಡು ಸಂಭ್ರಮಿಸಿದರು.
ಶಾಸಕ ಜಿ.ಹಂಪಯ್ಯ ನಾಯಕ ಮಾತನಾಡಿ ಕಾಂಗ್ರೆಸ್ ಯಾವತ್ತಿದ್ದರು ಬಡವರು , ದಿನ ದಲಿತರು , ಶ್ರಮೀಕರ ಪಕ್ಷ  , ಕವಿತಾಳ ಒಂದು ದೊಡ್ಡ ಪಟ್ಟಣ ಇಂತಹ ಒಂದು ಪಟ್ಟಣ ಪಂಚಾಯಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾದ ರಾಜೇಶ್ವರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು .
ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಎಲ್ಲರೋಂದಿಗೆ ಬೆರೆತು ಅಧಿಕಾರ ನಿಭಾಯಿಸಬೇಕದು ಸಲಹೆ ನೀಡಿದರು .
ಈ ಸಂದರ್ಭದಲ್ಲಿ ಮಾ.ಜಿ.ಪಂ.ಸದಸ್ಯ ಕಿರಿಲಿಂಗಪ್ಪ .ಮಾ.ತಾ.ಪಂ.ಸದಸ್ಯ ಮಾಳಪ್ಪ ತೋಳ , ಮಾಜಿ.ಅಧ್ಯಕ್ಷೆ ಖಾಸೀಂ ಬಿ ಚಾಂದಪಾಷಾ , ಉಪಾಧ್ಯಕ್ಷೆ  ಎಲೀಜಾ ಓನಪ್ಪ  , ಸದಸ್ಯರಾದ ರಮಾದೇವಿ , ಮಲ್ಲಿಕಾರ್ಜುನ ಗೌಡ  ,ಹುಲುಗಪ್ಪ , ಅಮರೇಶ ಕಟ್ಟಿಮನಿ , ರಮೇಶ ನಗನೂರು , ಮುಖಂಡರಾದ ರಾ.ವಾ.ವಿ.ವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಿವಣ್ಣ ವಕೀಲ್  ಶೇಖರಪ್ಪ ಸಾಹುಕಾರ್ ಹಟ್ಟಿ , ಚನ್ನರೇಡ್ಡಿ ಸಾಹುಕಾರ್ ಬಾವಿಕಟ್ಟಿ  ,  ಶಿವರಾಜ ಭೋವಿ , ಹನುಮಂತ ಅರಕೇರಿ

Leave a Reply

Your email address will not be published. Required fields are marked *