ಸಿಂಧನೂರು : ಜಿಲ್ಲೆಯ ಸಿಂಧನೂರು ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಡಿ.ವಿಜಯಲಕ್ಷ್ಮಿ ಮನೆ ಸೇರಿದಂತೆ ಒಟ್ಟು 5 ಕಡೆಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.
ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ದೂರಿನ ಮೇರೆಗೆ ದಾಳಿ ಮಾಡಲಾಗಿದೆ.ರಾಯಚೂರಿನ ಗಂಗಾಪರಮೇಶ್ವರ ಲೇಔಟ್ ನಲ್ಲಿ ನಾಲ್ಕಂತಸ್ತಿನ ಮನೆ ಮತ್ತು ಪಕ್ಕದಲ್ಲೇ ಇರುವ ಇನ್ನೊಂದು ಮನೆಯಲ್ಲಿ ದಾಖಲೆಗಳ ಶೋಧ ಕಾರ್ಯಚರಣೆ ನಡೆಸಲಾಗುತ್ತಿದೆ.
ಅದರ ಜೊತೆಗೆ ಸಿಂಧನೂರು ಕಚೇರಿ, ಯಾದಗಿರಿ ತೋಟದ ಮನೆ, ಜೋಳದಡಗಿಯಲ್ಲಿರುವ ಅವರ ತಂಗಿ ಮನೆಯ ಮೇಲೆಯೂ ದಾಳಿ ನಡೆಸಲಾಗಿದೆ.
ಯಾದಗಿರಿಯಲ್ಲಿ 30 ಎಕರೆ ಜಮೀನು, ಹಾಗೂ ಲೆಔಟ್ ಗಳು, ಚಂದ್ರಬಂಡಾ ಬಳಿ ಜಮೀನು, ಸೇರಿದಂತೆ ಸಾಕಷ್ಟು ಕಡೆ ಆಸ್ತಿ ಸಂಪಾದನೆ ಮಾಡಿರುವ ಮಾಹಿತಿಗಳು ಲಭ್ಯವಾಗಿದೆ. ರಾಯಚೂರು, ಕೊಪ್ಪಳ, ಹಾಗೂ ಬಳ್ಳಾರಿ ಜಿಲ್ಲೆ ಲೋಕಾಯುಕ್ತ ಪೊಲೀಸರು 5 ತಂಡಗಳು ರಚಿಸಿ ದಾಳಿ ಮಾಡಿದ್ದಾರೆ. ಇನ್ನೂ ಒಂದೂವರೆ ವರ್ಷ ಮಾತ್ರ ಸೇವಾವಧಿ ಬಾಕಿ ಇತ್ತು. ಇವರು ರಾಯಚೂರು ಮತ್ತು ಸಿಂಧನೂರಿನಲ್ಲಿಯೇ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು ಎಂಬ ಮಾಹಿತಿಯು ಇದೆ.


