ಸಿಂಧನೂರು : ಸಿಂಧನೂರು ತಾಲೂಕಿನ ಭೂತಲದಿನ್ನಿ ಗ್ರಾಮ ಪಂಚಾಯತಿಯ ಆವರಣದಲ್ಲಿ ಅಂಗವಿಕಲರ ಹಾಗೂ ಮಕ್ಕಳ ಗ್ರಾಮಸಭೆ ನಡೆಸಲಾಯಿತು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸವಿತಾ ಅವರು ಮಾತನಾಡಿ, ಸರ್ಕಾರದಿಂದ ವೀಕಲಚೇತನರಿಗೆ ದೊರೆಯುವ ವಿಶೇಷ ಯೋಜನೆ ಬಗ್ಗೆ ಪುನರ್ವಸತಿ ಕಾರ್ಯಕರ್ತರು ಮಾಹಿತಿಯನ್ನು ನೀಡುವ ಕೆಲಸ ಮಾಡಲಾಗುತ್ತಿದೆ. ಅವರೆಲ್ಲರ ಬಗ್ಗೆ ವಿಶೇಷ ಕಾಳಜಿಯನ್ನು ಗ್ರಾಮ ಪಂಚಾಯಿತಿ ಹೊಂದಿದೆ. ಮೀಸಲು ಅನುದಾನವನ್ನು ಅವರಿಗಾಗಿಯೇ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುತ್ತದೆ ಎಂದರು.
ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸಲು ಹಾಗೂ ಆ ಹಕ್ಕುಗಳಿಗೆ ಚ್ಯುತಿ ಬಂದಾಗ ರಕ್ಷಣೆ ಮಾಡಿಕೊಳ್ಳಲು ಹಾಗೂ ತಮ್ಮ ಬೇಕುಬೇಡಗಳನ್ನು ಸಮಾಜದ ಮುಂದೆ ನಿರ್ಭಯವಾಗಿ ಹೇಳಿಕೊಳ್ಳಲು ಇರುವ ಒಂದೇ ಒಂದು ವೇದಿಕೆ ಎಂದರೆ ಮಕ್ಕಳ ವಿಶೇಷ ಗ್ರಾಮಸಭೆ. ನಾಗರಿಕರು ತಮ್ಮ ಬೇಡಿಕೆಗಳನ್ನು ಅಹವಾಲುಗಳನ್ನು ಗ್ರಾಮಸಭೆಯ ಮೂಲಕ ಸಲ್ಲಿಸುವಂತೆ ಮಕ್ಕಳೂ ಸಹ ತಮ್ಮ ಬೇಡಿಕೆಗಳನ್ನು ಕುಂದು-ಕೊರತೆಗಳನ್ನು ಮಕ್ಕಳ ಗ್ರಾಮಸಭೆಯ ಮೂಲಕ ಪರಿಹರಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ: ಗ್ರಾಮ ಪಂಚಾಯತಿಯ ಸದಸ್ಯ ಕಂಠೆಪ್ಪ, ಲೆಕ್ಕಾಧಿಕಾರಿ ಜಲಾಲೆಪ್ಪ, ಶಿಕ್ಷಕರಾದ ಸತ್ಯಪ್ಪ, ಯಮನಪ್ಪ, ಗ್ರಾಮೀಣ ಪುನರಾವಸತಿ ಕಾರ್ಯಕರ್ತ ಮಾಯಪ್ಪ ಮಲ್ಲಾಪುರ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಮತ್ತು ಅನೇಕರು ಶಾಲೆಯ ಮಕ್ಕಳು ವಿಕಲಚೇತನರು ಭಾಗವಹಿಸಿದ್ದರು. ವಿಶೇಷ ಚೇತನರ ಆದೇಶದ ಪ್ರತಿಯನ್ನು ಇದೇ ವೇಳೆ ವಿತರಿಸಿದರು.

