ಸಿಂಧನೂರು : ಡಿ 21 ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಣಿ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಸುಮಾರು ಒಂದುವರೆ ವರ್ಷಗಳ ಕಾಲ ಆಶ್ರಯ ಪಡೆದಿದ್ದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ನಿವಾಸಿಯಾದ ಪದ್ದಮ್ಮ ಗಂ. ವಟಮನ ರಾಮಪ್ಪ ವಯಸ್ಸು-64 ಇವರಿಗೆ ಯಾರು ಇಲ್ಲದ್ದನ್ನು ಗಮನಿಸಿ ಹಗರಿಬೊಮ್ಮನಹಳ್ಳಿ ತಹಸಿಲ್ದಾರರಾದ ಕವಿತಾ ಹಾಗೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮತ್ತು ಪದಾಧಿಕಾರಿಗಳು ಆಶ್ರಮದಲ್ಲಿ ಆಶ್ರಯ ಕೊಡಿಸಿದ್ದರು. ಇವರು ಮಲಗಿದ್ದಲ್ಲಿ ಎಲಾ ಚಟುವಟಿಕೆಗಳನ್ನು ಮಾಡಿಕೊಳ್ಳುತ್ತಾ ಕಾರುಣ್ಯ ಕುಟುಂಬದ ಕೂಸಾಗಿ ಆಶ್ರಮದಲ್ಲಿ ಬದುಕು ಕಂಡುಕೊಂಡಿದ್ದಳು. ಇವರ ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆ ಕೊಡಿಸಿದರು ಸಹ ಚಿಕಿತ್ಸೆ ಫಲಕಾರಿಯಾಗದೆ ಇಂದು ನಮ್ಮನ್ನೆಲ್ಲ ಅಗಲಿದ್ದಾಳೆ. ಈ ತಾಯಿಯ ನೆನಪುಗಳು ಮಾತ್ರ ನಮ್ಮ ಜೊತೆ ಉಳಿದಿರುತ್ತವೆ. ಈ ತಾಯಿಯ ಮರಣದ ನಂತರ ನಾವು ಹಗರಿಬೊಮ್ಮನಹಳ್ಳಿ ತಾಲೂಕ ಆಡಳಿತ ಹಾಗೂ ಗ್ರಾಮ ಪಂಚಾಯತ ಆಡಳಿತಕ್ಕೆ ಮಾಹಿತಿ ನೀಡಿದಾಗ. ನಿಮ್ಮ ಸಂಸ್ಥೆಯ ತೀರ್ಮಾನವೇ ಅಂತಿಮ ಎಂದು ಸೂಚಿಸಿದರು. ಹೀಗಾಗಿ ನಮ್ಮ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ ಒಪ್ಪಿಗೆಯ ಮೇರೆಗೆ ನಾವು ಅನಾಥರಾಗಿರಬಹುದು ಸಮಾಜ ಅನಾಥವಾಗಬಾರದು ನಮ್ಮ ಕಣ್ಣುಗಳ ಇನ್ನೊಬ್ಬರ ಬಾಳಿಗೆ ಬೆಳಕಾಗಲಿ ಇವರ ದೇಹ ವೈದ್ಯಕೀಯ ಶಿಕ್ಷಣಕ್ಕೆ ಮೆರುಗು ನೀಡಲಿ ಎನ್ನುವ ಉದ್ದೇಶದಿಂದ ರಾಯಚೂರಿನ ಅಂಗರಕ್ಷಣಾ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ನವೀನ್ ಹಾಗೂ ನೇತ್ರ ವಿಭಾಗದ ಡಾ. ಸಿದ್ದೇಶ್ ಇವರುಗಳಿಗೆ ಮಾಹಿತಿ ನೀಡಿ ರಾಯಚೂರಿನ ರಿಮ್ಸ್ ಮೆಡಿಕಲ್ ಕಾಲೇಜಿಗೆ ನೇತ್ರದಾನ ದೇಹ ದಾನ ಮಾಡಲಾಗಿದೆ ಎಂದು ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸಯ್ಯಸ್ವಾಮಿ ಹಿರೇಮಠ ಅವರು ತಿಳಿಸಿದರು. ಈ ಸಮಯದಲ್ಲಿ ರಿಮ್ಸ್ ಮೆಡಿಕಲ್ ಕಾಲೇಜಿನ ಸಿಬ್ಬಂದಿಗಳಾದ ಜಬಿ ಉಲ್ಲಾ ಹಾಗೂ ಶೇಖ್ ಅಬ್ದುಲ್ ಮತೀನ್ ಇವರುಗಳ ಮೂಲಕ ದೇಹವನ್ನು ಒಪ್ಪಿಸಲಾಯಿತು ಸಮಯದಲ್ಲಿ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ ಹಾಗೂ ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ.ಜ್ಯೋತಿ. ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *