ಸಿಂಧನೂರು ಡಿಸೆಂಬರ್ 22 : ಸಮೀಪದ ಜವಳಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಅರಗಿನ ಮರ, ಜಂಗಮರ ಹಟ್ಟಿ, ಸುಲ್ತಾನಪುರ ತುರುಕಟ್ಟಿ ,ಮಾರುತಿ ನಗರ, ಜವಳಗೇರಾದ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಯಾವುದೇ ಮಗು ಲಸಿಕೆಯಿಂದ ತಪ್ಪಿಸಿಕೊಳ್ಳದಂತೆ ಪೋಲಿಯೋ ತಂಡಗಳನ್ನಾಗಿ ಮಾಡಿ ಮನೆ ಭೇಟಿ ನೀಡಿ ಲಸಿಕೆಯನ್ನು ಹಾಕಲಾಗುತ್ತದೆ, ದಿನಾಂಕ 21 ಡಿಸೆಂಬರ್ ಪೋಲಿಯೋ ಭಾನುವಾರದಂದು ನಿಮ್ಮ ಅನಾರೋಗ್ಯದ ಕಾರಣಗಳಿಂದ ಮಗುವಿಗೆ ಲಸಿಕೆಯನ್ನು ಕೊಡಿಸದಿದ್ದ ಸಂದರ್ಭದಲ್ಲಿ ದಿನಾಂಕ 22 ರಿಂದ 24 ರವರಿಗೆ ಮನೆ ಮನೆ ಭೇಟಿ ನೀಡುವ ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತರು ಆರೋಗ್ಯ ಸಿಬ್ಬಂದಿಯವರ ಹತ್ತಿರ ಭೇಟಿಯಾಗಿ ಪೋಲಿಯೋ ಲಸಿಕೆಯನ್ನು ಹಾಕಿಸಬೇಕೆಂದು ಮಾಹಿತಿ ಶಿಕ್ಷಣ ನೀಡಲಾಗುತ್ತದೆ ಎಂದು ಬಾಲಪ್ಪ ನಾಯಕ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಾದ ಮಹೇಶ್ವರಿ, ಶರಣಮ್ಮ, ಶಿವಮ್ಮ ಈರಮ್ಮ ಅಂಗನವಾಡಿ ಕಾರ್ಯಕರ್ತರಾದ ಬಸವಂತಮ್ಮ , ಈರಮ್ಮ ಮತ್ತು ಮತ್ತು ಮಕ್ಕಳ ತಾಯಂದಿರು ಉಪಸ್ಥಿತರಿದ್ದರು
