ಮಾನ್ವಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ) ರಾಯಚೂರು ಜಿಲ್ಲಾ ಅಧ್ಯಕ್ಷರಾದ ಬಿ. ರಾಮಣ್ಣ ನಾಯಕ ಅವರ ಆದೇಶದ ಮೇರೆಗೆ ಮಾನ್ವಿ ತಾಲೂಕ ಘಟಕದ ಅಧ್ಯಕ್ಷರಾಗಿ ದೇವೇಂದ್ರ ನಾಯಕ (ಮಾನ್ವಿ) ಅವರನ್ನು ನೇಮಕ ಮಾಡಲಾಗಿದೆ.
ನೂತನ ತಾಲೂಕಾಧ್ಯಕ್ಷರಿಗೆ ಸಂಘದ ಎಲ್ಲಾ ತತ್ವ–ಸಿದ್ಧಾಂತಗಳಿಗೆ ಬದ್ಧರಾಗಿ ಶೈಕ್ಷಣಿಕ, ಆರ್ಥಿಕ ಹಾಗೂ ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸುವಂತೆ ಸೂಚಿಸಿ ಅಧಿಕೃತ ಆದೇಶ ನೀಡಲಾಯಿತು. ನಂತರ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ದೇವೇಂದ್ರ ನಾಯಕ ಅವರಿಗೆ ಅವರ ಅಭಿಮಾನಿ ಬಳಗ ಸನ್ಮಾನಿಸಿ ಗೌರವ ಸಲ್ಲಿಸಿತು.
ಈ ಸಂದರ್ಭದಲ್ಲಿ ನಾಯ್ಡು ನಾಯಕ, ಹನುಮೇಶ್ ನಾಯಕ, ಕೊಂಡಯ್ಯ ನಾಯಕ, ಯಲ್ಲಯ್ಯ ನಾಯಕ, ದೇವರಾಜ್ ನಾಯಕ, ರಮೇಶ್ ನಾಯಕ, ಉಪೇಂದ್ರ ನಾಯಕ, ತಾಯಣ್ಣ ನಾಯಕ, ನರಸಿಂಹ ನಾಯಕ, ಯಲ್ಲಪ್ಪ ನಾಯಕ, ರೇಣುಕಾ ರಾಜಾ ನಾಯಕ, ಜಗದೀಶ್ ನಾಯಕ, ವಿರೇಶ್ ನಾಯಕ, ಮಂಜು ನಾಯಕ, ಈರಯ್ಯ ನಾಯಕ, ವೆಂಕಟೇಶ್ ನಾಯಕ, ವಿಶ್ವನಾಥ ನಾಯಕ, ರಾಜು ನಾಯಕ, ಮಹೇಶ್ ನಾಯಕ, ಶ್ರೀನಿವಾಸ್ ನಾಯಕ, ಚಂದ್ರು ನಾಯಕ, ಪ್ರಜ್ವಲ್ ನಾಯಕ, ಪರಶುರಾಮ್ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

