ಸಿಂಧನೂರು : ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಕಲಾಪ ವೀಕ್ಷಿಸಲು
ಹಾಗೂ ಶಾಲಾ ಶೈಕ್ಷಣಿಕ ಮಕ್ಕಳ ಪ್ರವಾಸದ ಅಡಿಯಲ್ಲಿ 9ನೇ ತರಗತಿ ಓದುತ್ತಿರುವ ಮಕ್ಕಳಿಗೆ ಸಮಾಜ ವಿಜ್ಞಾನ ಸಂಬಂಧಿಸಿದ ವಿಷಯಾಧಾರಿತ ಪೌರನೀತಿ ಎನ್ನುವ ವಿಷಯ ಇದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತ
ಸಿಂಧನೂರು ತಾಲ್ಲೂಕಿನ ಸೋಗೂರೇಶ್ವರ ಎಜುಕೇಶನ್ ಟ್ರಸ್ಟ ನ ಶ್ರೀಧರ್ ಪಬ್ಲಿಕ್ ಶಾಲೆ ಕೆ ಹಂಚಿನಾಳ ಕ್ಯಾಂಪ್
(ಶಾಂತಿನಗರ) ದಿಂದ ಬಂದಿದ್ದ ವಿದ್ಯಾರ್ಥಿಗಳು ಹಲವು ಸಚಿವರ ಶಾಸಕರ ಜತೆ ಸಂವಾದ ನಡೆಸಿದರು.
ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ ರವರು ಮಾತನಾಡಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಇಂಗ್ಲಿಷ್ ಮಾದ್ಯಮ ಕನ್ನಡ ಮಾಧ್ಯಮ
ಎಂದು ಬೇದ ಭಾವ ಬೇಡ ಕನ್ನಡ ಹಾಗು ಇಂಗ್ಲಿಷ್ ಒಂದೇ ತೂಕ ಹೊಂದಿರುವಂತದ್ದು
ನಿಮ್ಮದೇ ಆದ ಸ್ವಂತಿಕೆಯಿಂದ ವಿದ್ಯಾಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಕಾರ್ಯ ಕಲಾಪವನ್ನು ಅಧಿವೇಶನದಲ್ಲಿ ತುಂಗಭದ್ರ ಜಲಾಶಯ ಮತ್ತು ಶಿಕ್ಷಣದ ಕುರಿತು ವಿಷಯದ ಕುರಿತು ಕಲಾಪದಲ್ಲಿ ಚರ್ಚಿಸುವುದನ್ನು ವಿದ್ಯಾರ್ಥಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಉತ್ಸಾಹದಿಂದ ಕಣ್ತುಂಬಿಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳು ಸದನದ ಕಾರ್ಯ ಕಲಾಪದ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಸಂಭ್ರಮಿಸಿದ ವಿದ್ಯಾರ್ಥಿಗಳು
ಶಿಕ್ಷಕ-ಶಿಕ್ಷಕಿಯರ ಕಣ್ಗಾವಲಿನಲ್ಲಿ ಶಿಸ್ತಿನ ಸಿಪಾಯಿಗಳಂತೆ ವಿವಿಧ ಶಾಲಾ-ಕಾಲೇಜುಗಳಿಂದ ಆಗಮಿಸಿದ್ದ ಮಕ್ಕಳು, ಸರತಿ ಸಾಲಿನಲ್ಲಿ ಸೌಧ ಪ್ರವೇಶಿಸುತ್ತಿದ್ದರು. ಅಲ್ಲದೇ ಸುವರ್ಣ ವಿಧಾನಸೌಧ, ಮಹಾತ್ಮ ಗಾಂಧೀಜಿ ಪ್ರತಿಮೆ, ವಿಶ್ವದ ಎರಡನೇ ದೊಡ್ಡ ರಾಷ್ಟ್ರಧ್ವಜ, ರಾಣಿ ಚನ್ನಮ್ಮ-ಸಂಗೊಳ್ಳಿ ರಾಯಣ್ಣ-ಡಾ.ಬಿ.ಆರ್.
ಅಂಬೇಡ್ಕರ್ ಪ್ರತಿಮೆ, ಕಾರಂಜಿ ಪಾರ್ಕ್ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು.
ಈ ವೇಳೆ ಮಾಜಿ ಸಚಿವರ ಶಿವರಾಂ ಹೆಬ್ಬಾರ್, ಶಾಸಕ ಶರಣಗೌಡ ಕಂದಕೂರು ಹಾಗೂ ನಾಗರಾಜ,
ವೀರಭದ್ರಪ್ಪ ,
ಹನುಮಂತ ರಡ್ಡಿ ವಿರುಪಾಪುರ
ವರ್ಷ ಸುಗೂರ ಸಿ ಇ ಒ ಮಂಜುನಾಥ ಸೂಗೂರ ಮುಖ್ಯಗುರುಗಳು ಶ್ರೀಧರ್ ಪಬ್ಲಿಕ್ ಸ್ಕೂಲ್ ಹಾಗೂ ಶಾಲಾ ಆಡಳಿತ ಮಂಡಳಿ, ಸಿಬ್ಬಂದಿಗಳು ಇದ್ದರು


