ಕವಿತಾಳ:- `ಉತ್ತಮ ಆರೋಗ್ಯಕ್ಕಾಗಿ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಮಕ್ಕಳಿಗೆ ಎರಡು ಹನಿ ಪೊಲೀಯೋ ಹಾಕುವ ಮೂಲಕ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ನೀಡಲು ಪಾಲಕರು ಮುಂದಾಗಬೇಕು’ ಎಂದು ಗ್ರಾಮ ಪಂಚಾಯತಿ ಸದಸ್ಯ ಆದನಗೌಡ ಪಾಟೀಲ್ ಹೇಳಿದರು.
ಅವರು ಇಂದು ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೋಂಡಿರುವ ಪೊಲೀಯೋ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
`ಪೊಲೀಯೋ ಮುಕ್ತ ಭಾರತವನ್ನು ಮಾಡುವ ಮೂಲಕ ನಮ್ಮ ಮಕ್ಕಳಿಗೆ ಉತ್ತಮ ಆರೋಗ್ಯ ಮತ್ತು ಅಂಗವಿಕಲತೆಯನ್ನು ತಡೆಗಟ್ಟುವಲ್ಲಿ ಪ್ರತಿಯೊಬ್ಬರು ಮುಂದಾಗಬೇಕಾಗಿದೆ ಆದ್ದರಿಂದ ಐದು ವರ್ಷದೊಳಗಿನ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಪೊಲೀಯೊ ಹನಿ ಹಾಕಿಸುವ ಮೂಲಕ ಪೊಲೀಯೋ ಮುಕ್ತ ಭಾರತಕ್ಕೆ ಸಹಕಾರ ನೀಡುವಂತೆ’ ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸುವರ್ಣ, ಅಂಗನವಾಡಿ ಕಾರ್ಯಕರ್ತೆ ಸುರೇಖಾ ಪಾಟೀಲ್, ಆಶಾ ಕಾರ್ಯರ್ಯರ್ತೆಯರಾದ ಲಕ್ಷ್ಮೀ, ಹುಸೇನಮ್ಮ, ಮುಖಂಡರಾದ ಅಮರೇಶಸ್ವಾಮಿ, ಶರಣಬಸವ ಗುರನಾಳ ಇನ್ನಿತರರು ಇದ್ದರು.


