ಮಾನ್ವಿ: ಪಟ್ಟಣದ ಮಾನ್ವಿ ಬ್ಯಾಂಕ್ ಸಭಾಂಗಣದಲ್ಲಿ ಮಾನ್ವಿ ಲಯನ್ಸ್ ಕ್ಲಬ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಟ್ಟಣದಲ್ಲಿ ವಿವಿಧ ದಿನ ಪತ್ರಿಕೆಗಳನ್ನು ವಿತರಿಸುವ ಪತ್ರಿಕ ವಿತರಕರಿಗೆ ಮಾನ್ವಿ ಲಯನ್ಸ್ ಕ್ಲಬ್‌ನ ಅಧ್ಯಕ್ಷರಾದ ಎಂ. ನಾಗರಾಜ ಸ್ವೆಟರ್‌ಗಳನ್ನು ವಿತರಿಸಿ ಮಾತನಾಡಿ ಪ್ರತಿ ದಿನ ಪತ್ರಿಕೆಗಳಲ್ಲಿ ಬರವ ಸುದ್ದಿಗಳನ್ನು ಹೊತ್ತ ದಿನ ಪತ್ರಿಕೆಗಳನ್ನು ಬೆಳಗಿನಜಾವವೇ ಮನೆ ಬಾಗಿಲಿಗೆ ತಲುಪಿಸುವ ಪತ್ರಿಕೆಗಳನ್ನು ಹಂಚುವ ಬಹುತೇಕ ಹುಡುಗರು ವಿದ್ಯಾರ್ಥಿಗಳಾಗಿದ್ದು ಅವರು ಪ್ರತಿದಿನ ಪತ್ರಿಕೆಗಳನ್ನು ಹಂಚುವ ಮೂಲಕ ಬರುವ ಸ್ವಲ್ಪ ಅದಾಯದಿಂದ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುತ್ತಿರುವುದು ಕಂಡುಬರುತ್ತದೆ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ರವರು ಕೂಡ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪತ್ರಿಕೆಗಳನ್ನು ಹಂಚುವ ಮೂಲಕ ವಿದ್ಯಾಭ್ಯಸವನ್ನು ಪೂರ್ಣಗೊಳಿಸಿ ದೇಶದ ಉನ್ನತ ಸ್ಥಾನವಾದ ರಾಷ್ಟçಪತಿ ಹುದ್ದೆಯನ್ನು ಅಲಂಕಾರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದರು. ಇತ್ತಿಚಿನ ದಿನಗಳಲ್ಲಿ ತೀವ್ರವಾದ ಚಳಿ ಇಂದಾಗಿ ಪತ್ರಿಕ ವಿತರಕರ ಆರೋಗ್ಯದ ಮೇಲೆ ಪರಿಣಾಮವಾಗಬಾರದು ಎನಗ್ನುವ ಉದ್ದೇಶದಿಂದ ಮಾನ್ವಿ ಲಯನ್ಸ್ ಕ್ಲಬ್‌ನ ವತಿಯಿಂದ ಪತ್ರಿಕ ವಿತರಕರಿಗೆ ಸ್ವೆಟರ್‌ಗಳನ್ನು ವಿತರಣೆ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ನಮ್ಮ ಮಾನ್ವಿ ಲಯನ್ಸ್ ಕ್ಲಬ್‌ನ ವತಿಯಿಂದ ಪತ್ರಿಕ ವಿತರಕರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ, ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಪತ್ರಿಕೆಗಳನ್ನು ಹಂಚುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅಗತ್ಯ ಆರ್ಥಿಕ ನೆರವನ್ನು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಕೇಲವೆ ದಿನಗಳಲ್ಲಿ ಪಟ್ಟಣದಲ್ಲಿ ಹುಬ್ಬಳಿ ಜೋಷಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಕಣ್ಣಿನ ಆಸ್ಪತ್ರೆಯನ್ನು ಪ್ರಾರಂಭಿಸಿ ತಾಲೂಕಿನ ಜನರಿಗೆ ಉತ್ತಮ ನೇತ್ರ ಚಿಕಿತ್ಸೆ ನೀಡುವ ಕಾರ್ಯವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪಟ್ಟಣದ 20ಕ್ಕೂ ಹೆಚ್ಚು ಪತ್ರಿಕೆ ವಿತರಕರಿಗೆ ಹಾಗೂ ರಾತ್ರಿ ವೇಳೆ ಕೇಲಸ ಮಾಡುವ 10ಕ್ಕೂ ಹೆಚ್ಚು ಕಾವಾಲುಗರರಿಗೆ ಸ್ವೇಟರ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ. ರೋಹಿಣಿ ಮಾನ್ವಿಕರ್, ಡಾ. ಸುರೇಶ ಬಾಬು, ಶ್ರೀ ನಗರೇಶ್ವರ ಆರ್ಯ ವೈಶ್ಯ ಸಂಘದ ತಾ. ಅಧ್ಯಕ್ಷರಾದ ಆರ್. ಮುತ್ತುರಾಜ್ ಶೆಟ್ಟಿ, ವಿಪ್ರಸಮಾಜದ ತಾ.ಅಧ್ಯಕ್ಷರಾದ ಮುದ್ದುರಂಗ ರಾವ್ ಮುತಲಿಕ್ , ರಾಮಲಿಂಗಪ್ಪ ಲಯನ್ಸ ಕ್ಲಬ್‌ನ ಕಾರ್ಯದರ್ಶಿ ಶಾಂತಮೂರ್ತಿ, ಖಜಾಂಚಿ ಶ್ರೀರಾಮ ರಾಜು, ಸದಸ್ಯರಾದ ಈರಣ್ಣ ಮರ್ಲಟ್ಟಿ, ವೆಂಕಟೇಶ್ ಇಲ್ಲೂರ್, ಡಾ. ಬಸವರಾಜ್ ಸಜ್ಜನ್, ಬಸವರಾಜ್ ಕಿರ್ಡಿ,ಶಂಭುಲಿAಗಯ್ಯಸ್ವಾಮಿ ಹಿರೇಮಠ,ತಾ.ಪತ್ರಿಕಾ ವಿತರಕರ ಸಂಘದ ಅಧ್ಯಕ್ಷರಾದ ಬಸವನಗೌಡ ಮೇಟಿಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *