ಕವಿತಾಳ:-
ಪಟ್ಟಣದ ಶಿಕ್ಷಕ ಬಸವರಾಜ ಪಲಕನಮರಡಿ ಅವರ ಮಗಳು ಡಾ.ಸುರೇಖಾ ಪಲಕನಮರಡಿ ಅವರಿಗೆ ವನಸಿರಿ ಫೌಂಡೇಷನ್ ವತಿಯಿಂದ “ವೈದ್ಯಕೀಯ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇತ್ತೀಚೆಗೆ ಬಳ್ಳಾರಿಯಲ್ಲಿ ನಡೆದ ಕಾರ್ಯಮಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಡಾ. ಸುರೇಖಾ ಪಲಕನಮರಡಿ ಅವರು ಪ್ರಸ್ತುತ ಆನ್ವರಿ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಮತ್ತು ಕವಿತಾಳ ಪಟ್ಟಣ ಹಾಗೂ ಆನ್ವರಿ ಗ್ರಾಮದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
