ಕವಿತಾಳ: ದ್ವಿತೀಯ ಪಿ ಯು ಸಿ ತರಗತಿ ಎಲ್ಲಾ ಮಕ್ಕಳ ಕಲಿಕೆಯನ್ನು ಸುಧಾರಿಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಬೇಕೆಂದು ಸ್ಥಳೀಯ ಪೊಲೀಸ್ ಠಾಣಾ ಪಿ ಎಸ್ ಐ ಗುರುಚಂದ್ರ ಯಾದವ ಹೇಳಿದರು.ಜಿಲ್ಲಾಡಳಿತ, ಜಿಪಂ. ರಾಯಚೂರು, ತಾಪಂ.ಸಿರವಾರ ಇವರ ಸಹಯೋಗದಲ್ಲಿ ಪಟ್ಟಣದ ಕರ್ನಾಟಕ ಪಬ್ಲಿಕ್ ಕಾಲೇಜ್ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ದ್ವಿತೀಯ ಪಿ ಯು ಸಿ ಮಕ್ಕಳಿಗೆ ಫಲಿತಾಂಶ ಬಲವರ್ಧನೆ ಕಾರ್ಯಗಾರ ಉದ್ದೇಶಿಸಿ ಮಾತನಾಡಿದ ಅವರು ಕಾಲೇಜ್ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಪರೀಕ್ಷಾ ಫಲಿತಾಂಶ ಸುಧಾರಿಸಲು ಶಿಕ್ಷಣ ಇಲಾಖೆ ರೂಪಿಸಿದ ಒಂದು ಯೋಜನೆವಾಗಿದೆ.ಪಠ್ಯಕ್ರಮ ಪೂರ್ತಿಗೊಳಿಸಿ,ವಿಶೇಷ ತರಗತಿ,ಪೋಷಕರ ಸಭೆ,ಮಾದರಿ ಪರೀಕ್ಷಾ ಮೂಲಕ ಮಕ್ಕಳಿಗೆ ಪರೀಕ್ಷೆ ಸಿದ್ಧತೆ,ಮೊಬೈಲ್ ಬಳಕೆ ನಿಷೇದ,ಆರೋಗ್ಯಮತ್ತು ಪೋಷಣೆ,ಮಕ್ಕಳ ಗೈರು ಹಾಜರಿ ನಿಯಂತ್ರಣ,ಶಿಕ್ಷಕರ ಪಾತ್ರ ಇವೆಲ್ಲವೂ ಮಕ್ಕಳ ಕಲಿಕೆ ಸುಧಾರಿಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸಲು ಸಹಾಯಕವಾಗಿದೆಂದು ಹೇಳಿದರು. ಸಿರವಾರ ತಾಪಂ ಎ ಬಿಎಫ್ ಡಾ| ಜ್ಞಾನಸುಂದರಿ ಕಾರ್ಯಕ್ರಮ ಕುರಿತು ಮಾತನಾಡಿದರು.ಪಿ ಯು ಕಾಲೇಜ್ ಪ್ರಭಾರಿ ಪ್ರಾಂಶುಪಾಲ್ ಮಹಾಂತಮ್ಮ, ಮೌಲಾಬಿ, ಅಮರೇಶ ಹಣಗಿ ನಾಗೇಶ, ಶಿವರಾಜ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇತರಿದ್ದರು.

