ಕವಿತಾಳ :-ರಾಯಚೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವೂ ಇದೇ ಡಿ.21ನೇ ತಾರೀಕಿನಿಂದ 24ರವರೆಗೂ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಿಸಬೇಕೆಂದು ಪಟ್ಟಣದ ಸರ್ಕಾರಿ ಪ್ರಾಥಮಿಕ ಕನ್ಯಾ ಶಾಲೆ ಮುಖ್ಯಗುರು ಅಯ್ಯನಗೌಡ ಹೇಳಿದರು.ಜಿಲ್ಲಾಡಳಿತ, ಜಿಪಂ. ರಾಯಚೂರು,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಸಮುದಾಯ ಆರೋಗ್ಯ ಕೇಂದ್ರ ಕವಿತಾಳ ಇವರ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಕನ್ಯಾ ಶಾಲಾ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಪೋಲಿಯೊ ಲಸಿಕಾ ಜಾಗೃತಿ ಜಾಥಾ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಯಶಸ್ವಿಗಾಗಿ ನಿಯೋಜನೆಗೊಂಡ ವೈದ್ಯರು ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ತಮಗೆ ನೀಡಿದ ಕೆಲಸವನ್ನುಅಚ್ಚುಕಟ್ಟಾಗಿನಿರ್ವಹಿಸುವಂತೆ ಸಲಹೆ ನೀಡಿದರು. ಸಂದರ್ಭದಲ್ಲಿ ಪ್ರಾ.ಆರೋಗ್ಯ ಸುರಕ್ಷಾಧಿಕಾರಿ, ಸುಮಂಗಲಾ, ಆಂಜಿನಮ್ಮ, ಪ್ರಯೋಗ ತಂತ್ರಜ್ಞ ಹನುಮಂತ,ಆಶಾಗಳಾದ ಸರಸ್ವತಿ, ಹುಚ್ಚಮ್ಮ, ರೇಣುಕಾ, ನಿಂಗಮ್ಮ, ಶಕೀರಾ, ಶಾಲಾ ಶಿಕ್ಷಕಿಯರಾದ ಸುಪ್ರಿತಾ, ಶ್ರೀದೇವಿ, ಬಸಮ್ಮ, ಮಂಜುಳಾ, ಲಕ್ಷ್ಮೀ, ಆಯಿಷಾ ಪಾಷಾ ಹಾಗೂ ಶಾಲಾ ಮಕ್ಕಳು ಸೇರಿದಂತೆ ಇತರಿದ್ದರು.

Leave a Reply

Your email address will not be published. Required fields are marked *